ನಮ್ಮ ಮೇಲೆ ಯಾವುದೇ ರಾಜಕೀಯ ಒತ್ತಡ ಇರಲಿಲ್ಲ: ಐಜಿಪಿ ಅಲೋಕ್ ಕುಮಾರ್

ಬಾಗಲಕೋಟೆ: ನಮ್ಮ ಮೇಲೆ ಯಾವುದೇ ರಾಜಕೀಯ ಒತ್ತಡ ಇರಲಿಲ್ಲ. ಪ್ರಕರಣದಲ್ಲಿ ನನ್ನನ್ನು ಸೈಡ್ ಲೈನ್ ಮಾಡಿಲ್ಲ ಅಂತಾ ಗಂಗಾಧರ ಚಡಚಣ ಹತ್ಯೆ ಪ್ರಕರಣದ ಕುರಿತು ಉತ್ತರವಲಯ ಐಜಿಪಿ ಅಲೋಕ್ ಕುಮಾರ್ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾರಂಭಿಕ ತನಿಖೆಯಲ್ಲಿ ಸಮರ್ಪಕ ತನಿಖೆ ‌ನಡೆಸಿ, ಪೂರಕ ದಾಖಲೆಗಳನ್ನ ಸಿಐಡಿಗೆ ಸಲ್ಲಿಸಿದ್ದೇವೆ. ಸಿಐಡಿ ತನಿಖೆ‌ ಮುಂದುವರೆಸುತ್ತಿದೆ‌ ಎಂದರು. ಶೂಟೌಟ್ ಘಟನೆಗಳು ಪದೇ, ಪದೇ ನಡೆದಿಲ್ಲ. ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸುತ್ತೇವೆ ಎಂದು ತಿಳಿಸಿದರು. ವಿಜಯಪುರ ಜಿಲ್ಲೆಯಲ್ಲಿ ಪಿಸ್ತೂಲ್ ಬಳಕೆದಾರರ ಬಗ್ಗೆ ಮರುಪರಿಶೀಲನೆ ನಡೆಸುತ್ತೇವೆ. ಅವಶ್ಯಕತೆ ಇದ್ದವರಿಗೆ ಮಾತ್ರ ಪಿಸ್ತೂಲ್ ಇಟ್ಕೊಳ್ಳಲು ಅವಕಾಶ ನೀಡಲಾಗುವುದು ಎಂದರು.

ನಿಮ್ಮ ಸಲಹೆ ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂರ್ಪಕಿಸಿ:contact@firstnews.tv