ಮಾಜಿ ಸಿಎಂ ತವರಲ್ಲಿ ಸ್ಮಶಾನಕ್ಕಿಲ್ಲ ದಾರಿ, ನೀರು ನಿಂತ ಗದ್ದೆಯಲ್ಲೇ ಸಾಗಬೇಕು ಶವ

ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯರ ತವರು ಕ್ಷೇತ್ರದ ಗ್ರಾಮವೊಂದರಲ್ಲಿ ಸ್ಮಶಾನಕ್ಕೆ ದಾರಿ ಇಲ್ಲದೆ ಜನ ನೀರು ತುಂಬಿರುವ ಗದ್ದೆಯಲ್ಲಿ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಸಿದ್ದರಾಮಯ್ಯರ ವರುಣ ಕ್ಷೇತ್ರದ ಹದಿನಾರು ಮೋಳೆ ಗ್ರಾಮಸ್ಥರಿಗೆ ಇಂತಹ ಶೋಚನೀಯ ಪರಿಸ್ಥಿತಿ ಎದುರಾಗಿದೆ. ಒಂದೂವರೆ ಕಿಲೋಮೀಟರ್ ದೂರ​ ನೀರು ನಿಂತಿರುವ ಗದ್ದೆಯಲ್ಲೇ ಹೆಣಗಳನ್ನ ಹೊತ್ತು ಸಾಗಿ ಸ್ಮಶಾನ ಸೇರಬೇಕಾಗಿದೆ. 3 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಶವಸಂಸ್ಕಾರಕ್ಕೂ ಹರಸಾಹಸಪಡುವಂತಾಗಿದೆ. ಈ ಸಂಬಂಧ ಗ್ರಾಮಸ್ಥರು ಎಷ್ಟೋ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಕೊಟ್ಟರೂ ಇತ್ತ ಗಮನಹರಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv