ಲೋಕಸಭಾ ಚುನಾವಣೆ: ಮೈಸೂರು ಜಿಲ್ಲೆಯಲ್ಲಿ 18,95,056 ಮತದಾರರಿದ್ದಾರೆ -ಜಿಲ್ಲಾ ಚುನಾವಣಾಧಿಕಾರಿ

ಮೈಸೂರು: ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 9,44, 819 ಮಂದಿ ಪುರುಷ ಮತದಾರರು 9,50, 087 ಮಂದಿ ಮಹಿಳಾ ಮತದಾರರು ಹಾಗೂ 150 ಇತರೆ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ, ಚುನಾವಣಾಧಿಕಾರಿ ಅಭಿರಾಮ್ ಜಿ ಶಂಕರ್ ಮಾಹಿತಿ ನೀಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಪುರುಷ, ಮಹಿಳಾ ಹಾಗೂ ಇತರೆ ಸೇರಿದಂತೆ 18,95056 ಒಟ್ಟು ಮತದಾರರ ಸಂಖ್ಯೆ ಇದೆ.
ಒಟ್ಟು 2,187 ಮತಗಟ್ಟೆ ಗಳನ್ನ ಸ್ಥಾಪನೆ  ಮಾಡಲಾಗಿದೆ. ಈ ಚುನಾವಣೆಗೆ ಒಟ್ಟು 2,406 ಮತಗಟ್ಟೆ ಅಧ್ಯಕ್ಷಾಧಿಕಾರಿಗಳು, 2406 ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿಗಳು, 4,812 ಮಾತದಾನಾಧಿಕಾರಿಗಳ ನೇಮಕ ಮಾಡಲಾಗಿದೆ.

ಚುನಾವಣಾ ಹಿಂದಿನ ದಿನ ಮಸ್ಟರಿಂಗ್ ಕೇಂದ್ರಗಳಿಂದ ಬೆಳಗ್ಗೆ 6 ಗಂಟೆಗೆ ಬಸ್ ಗಳು ಹೊರಡಲಿವೆ. ಏಪ್ರಿಲ್ 18ರಂದು ಬೆಳಗ್ಗೆ 7ರಿಂದ ಸಂಜೆ 6ರ ವರಗೆ ಮತದಾನ ನಡೆಯಲಿದೆ. ಚುನಾವಣಾ ಹಿಂದಿನ ದಿನ ಮಸ್ಟರಿಂಗ್ ಕೇಂದ್ರ ಗಳಿಂದ ಬೆಳಗ್ಗೆ 6 ಗಂಟೆಗೆ ಬಸ್​ಗಳು ಹೊರಡಲಿವೆ. ಲೋಕಸಭಾ ಕ್ಷೇತ್ರದ ಮತಗಟ್ಟೆಗಳಿಗೆ ಅಧಿಕಾರಗಳನ್ನ ತಲುಪಿಸಲು ಒಟ್ಟು 405 ಕೆಎಸ್ ಆರ್ ಟಿಸಿ ಬಸ್, 114 ಜೀಪ್ ಹಾಗೂ 95 ಮಿನಿ ಬಸ್ ಬಳಕೆ ಮಾಡಲಾಗುತ್ತದೆ ಅಂತಾ ಅವರು ತಿಳಿಸಿದರು. ಇದೆ ವೇಳೆ ಸುದ್ದಿಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ಕೆ.ಟಿ ಬಾಲಕೃಷ್ಣ , ಎಸ್ ಪಿ ಅಮಿತ್ ಸಿಂಗ್. ಪಾಲಿಕೆ ಆಯುಕ್ತೆ ಶಿಲ್ಪಾನಾಗ್ , ಸಿಇಓ ಕೆ.ಜ್ಯೋತಿ ಹಾಜರಿದ್ದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv