ಪೊಲೀಸ್ ಠಾಣೆ ಪಕ್ಕವೇ ಕನ್ನಹಾಕಿದ ಕಳ್ಳರು

ಹೊಸಕೋಟೆ: ಪೊಲೀಸ್ ಠಾಣೆ ಸಮೀಪವೇ ಅಂಗಡಿಯ ಶೆಟರ್‌ ಮುರಿದು ಕಳ್ಳರು ಕೈ ಚಳಕ‌ ತೋರಿದ್ದಾರೆ. ಹೊಸಕೋಟೆ ತಾಲೂಕಿನ ನಂದಗುಡಿ ಗ್ರಾಮದಲ್ಲಿ ಮೆಡಿಕಲ್ ಸ್ಟೋರ್ ಮತ್ತು ಪ್ರಾವಿಜನ್ ಸ್ಟೋರ್‌ನ ಶೆಟರ್ ಮುರಿದು ಕಳ್ಳತನ ಮಾಡಿದ್ದಾರೆ. ಅಂಗಡಿಯಲ್ಲಿದ್ದ ₹ 25 ಸಾವಿರ ನಗದು ಮತ್ತು ಬೆಲೆ ಬಾಳುವ ವಸ್ತುಗಳನ್ನು ಕದ್ದಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ನಂದಗುಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. 4 ಜನರ ಕಳ್ಳರ ತಂಡ ತಡರಾತ್ರಿ ಕಾರಿನಲ್ಲಿ ಬಂದಿರಬಹುದೆಂದು ಶಂಕಿಸಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv