ಮೇಕೆ ಮೇಯಿಸುತ್ತಿದ್ದ ಮಹಿಳೆಯ ಮಾಂಗಲ್ಯ ಕಸಿದ ಸರಗಳ್ಳರು

ಬೆಂಗಳೂರು ಗ್ರಾಮಾಂತರ: ಮಹಿಳೆಯ ಮಾಂಗಲ್ಯ ಸರವನ್ನು ಕಳ್ಳರು ಕದ್ದು ಪರಾರಿಯಾಗಿರೋ ಘಟನೆ ನೆಲಮಂಗಲ ತಾಲ್ಲೂಕಿನ ಮಲ್ಲಾಪುರ ಗ್ರಾಮದ ತರಳಬಾಳು ಲೇಔಟ್ ಬಳಿ ನಡೆದಿದೆ. ಕೆಂಪಮ್ಮ ಎಂಬುವವರು ಮಾಂಗಲ್ಯ ಸರ ಕಳೆದುಕೊಂಡಿದ್ದು, ಎಂದಿನಂತೆ ಮೇಕೆ ಮೇಯಿಸುತಿದ್ದ ವೇಳೆ ಸರಗಳ್ಳರು ತಮ್ಮ ಕೈಚಳಕ ತೋರಿಸಿ ಪರಾರಿಯಾಗಿದ್ದಾರೆ.
ಕಳ್ಳರು ಬೈಕ್ ಮೇಲೆ ಬಂದು ಕೆಂಪಮ್ಮ ಎಂಬುವವರ ಮೇಲೆ ಹಲ್ಲೆ ನಡೆಸಿ ಕೊರಳಿನಲ್ಲಿದ್ದ 35ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡಿದ್ದಾರೆ. ಜೊತೆಗೆ, ಮತ್ತೊಬ್ಬ ಮಹಿಳೆ ಲಕ್ಷ್ಮಮ್ಮ ಕಿವಿ ಓಲೆ ಕಸಿಯಲು ಕಳ್ಳರು ಯತ್ನಿಸಿದ್ದಾರೆ. ಆದ್ರೆ ಇಬ್ಬರು ಮಹಿಳೆಯರು ಚೀರಾಡುತ್ತಿದ್ದಂತೆ ಸ್ಥಳದಿಂದ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *