ಸೆಕೆ ಅಂತ ಕಿಟಕಿ ತೆಗೆದು ಮಲಗ್ತೀರಾ? ಈ ಸ್ಟೋರಿ ಓದಿ

ನೆಲಮಂಗಲ: ಮಲಗಿದ್ದ ಮಹಿಳೆಯ ಕತ್ತಿನಿಂದ ಸರ ಕಿತ್ತು ಖದೀಮರು ಎಸ್ಕೇಪಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪಟ್ಟಣದ ಸುಭಾಷ್ ನಗರದಲ್ಲಿ ಇಂದು ಬೆಳಗಿನ ಜಾವ ಈ ಘಟನೆ ನಡೆದಿದೆ.
ಮನೆಯಲ್ಲಿ ಸೆಕೆ ಎಂದು ಕಿಟಕಿ ತೆರೆದು ಮಲಗಿದ್ದ ದಂಪತಿಯನ್ನ ಕಂಡ ಕಳ್ಳರು ಮಹಿಳೆಯ ಕತ್ತಲ್ಲಿದ್ದ ಸುಮಾರು 50 ಗ್ರಾಂ ಚಿನ್ನದ ಸರವನ್ನು ಕಿತ್ತು ಹೋಗಿದ್ದಾರೆ. ಲಕ್ಷ್ಮಮ್ಮ ಸರ ಕಳೆದುಕೊಂಡ ಮಹಿಳೆ. ಬೆಳಗ್ಗೆ 5.30ರ ಸುಮಾರಿಗೆ ಬೈಕ್​ನಲ್ಲಿ ಬಂದ ಕಳ್ಳರು ಮನೆಯ ಹತ್ತಿರ ಬರುತ್ತಿದ್ದಂತೆ ಬೈಕ್​ ಆಫ್​ ಮಾಡಿ ಮನೆಯ ಕಿಟಕಿಯಿಂದ ಕೈ ತೂರಿಸಿ ಸರ ಕಿತ್ತು ಎಸ್ಕೇಪ್​ ಆಗಿದ್ದಾರೆ. ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ನೆಲಮಂಗಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *