ಪತಿಯಿಂದಲೇ ಪತ್ನಿ ಹತ್ಯೆ

ಚಿತ್ರದುರ್ಗ: ಪತ್ನಿಯ ತಲೆಯ ಮೇಲೆ ಪಾಪಿ ಪತಿ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ತಾಲೂಕಿನ ಬಗ್ಗಲ ರಂಗವ್ವನಹಳ್ಳಿಯಲ್ಲಿ ನಡೆದಿದೆ.
ಸಾಕಮ್ಮ (26) ಪತಿಯಿಂದ ಕೊಲೆಯಾದ ನತದೃಷ್ಟೆ. ಪತ್ನಿಯನ್ನು ಕೊಲೆ ಮಾಡಿ ತಾನೂ ವಿಷ ಕುಡಿದು ಆತ್ಮಹತ್ಯೆಗೆ ಪತಿ ಶ್ರೀಧರ್ (28)ಯತ್ನಿಸಿದ್ದಾನೆ. ಬಗ್ಗಲರಂಗವ್ವನಹಳ್ಳಿಯ ಜಮೀನೊಂದರಲ್ಲಿ ವಿಷ ಸೇವಿಸಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಾಗ ವಿಷ ಸೇವಿಸಿದ್ದಾಗಿ ತಿಳಿದು ಬಂದಿದೆ. ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಶ್ರೀಧರ್‌ನನ್ನ ಪೊಲೀಸರು ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಕೊಲೆ ಮಾಡಿರೋದನ್ನ ಖಂಡಿಸಿದ ಸಾಕಮ್ಮನ ಸಂಬಂಧಿಕರು ಆಸ್ಪತ್ರೆ ಮುಂಭಾಗ ಆಕ್ರೋಶ ವ್ಯಕ್ತಪಡಿಸಿದರು. ತುರುವನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv