ಬೆಣ್ಣೆನಗರಿಯಲ್ಲಿ ಅದ್ಧೂರಿಯಾಗಿ ತೆರೆಕಂಡ ‘ದಿ ವಿಲನ್’

ದಾವಣಗೆರೆ: ಬಹುನಿರೀಕ್ಷಿತ ‘ದಿ ವಿಲನ್’ ಚಿತ್ರ ಬೆಣ್ಣೆನಗರಿಯಲ್ಲಿ ಅದ್ಧೂರಿಯಾಗಿ ತೆರೆಕಂಡಿದೆ. ಇಂದು ಬೆಳಗಿನ ಜಾವ 2 ಗಂಟೆಯಿಂದ ಸಿನಿಮಾ ನೋಡಲು ಅಭಿಮಾನಿಗಳು ಕಾದು ಕುಳಿತಿದ್ದರು. ಬೆಳಗಿನ ಜಾವ 2 ಗಂಟೆಗೆ ಬಿಡುಗಡೆಯಾಗಬೇಕಿದ್ದ ಚಿತ್ರ ಕಾರಣಾಂತರಗಳಿಂದ ರದ್ದಾಗಿ, ಬೆಳಿಗ್ಗೆ 7 ಗಂಟೆಯಿಂದ ಶೋ ಪ್ರಾರಂಭವಾಯಿತು. ಇನ್ನು ಟಿಕೆಟ್​ಗಾಗಿ ನೂರಾರು ಅಭಿಮಾನಿಗಳು ಕಾಯುತ್ತಿರುವ ದೃಶ್ಯ ಅಲ್ಲಲ್ಲಿ ಕಂಡುಬಂದಿತು.
ನಟ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿಮಾನಿಗಳು ತಮ್ಮ ನೆಚ್ಚಿನ ನಟರು ನಟಿಸಿರುವ ಚಿತ್ರ ವೀಕ್ಷಣೆಗೆ ಕಾತರದಿಂದ ಕಾದು ಕುಳಿತಿದ್ದರು. ಶೋ ಆರಂಭವಾಗುತ್ತಿದ್ದಂತೆ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. ನಗರದಲ್ಲಿ ಮೂರು ಚಿತ್ರ ಮಂದಿರಗಳಲ್ಲಿ ‘ದಿ ವಿಲನ್’ ಸಿನಿಮಾ ಬಿಡುಗಡೆ ಆಗಿದ್ದು, ಅಶೋಕ, ಪುಷ್ಪಾಂಜಲಿ ಹಾಗೂ ಎಸ್.ಎಸ್.ಮಾಲ್ ಮಲ್ಟಿಫ್ಲೆಕ್ಸ್​ ಥಿಯೇಟರ್​ಗಳಲ್ಲಿ ಚಿತ್ರ ತೆರೆ ಕಂಡಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv