ತಾಯಿ-ಮಗನ ಒಂದು ಮಾಡಿದ್ದಕ್ಕೆ ಪ್ರೇಮ್‌ಗೆ ಥ್ಯಾಂಕ್ಸ್..!

ಕಲಬುರ್ಗಿ: ಕಲಬುರ್ಗಿ ನಗರದಲ್ಲಿ ದಿ ವಿಲನ್ ಚಿತ್ರದ ಫೀವರ್ ಜೋರಾಗಿದೆ. ಅಭಿಮಾನಿಗಳ ಒತ್ತಾಯದ ಮೇರೆಗೆ ಬೆಳಗ್ಗೆ 8.30ಕ್ಕೆ ಮೊದಲ ಶೋ ಆರಂಭಗೊಂಡಿದೆ. ಸೂಪರ್ ಮಾರ್ಕೆಟ್‌ನಲ್ಲಿರುವ ಸಂಗಮ ಥಿಯೇಟರ್‌ನಲ್ಲಿ ಬೆಳಗ್ಗೆ 8.30ಕ್ಕೆ ಮೊದಲ ಶೋ ಆರಂಭಗೊಂಡಿದ್ದು, ಸುದೀಪ್, ಶಿವರಾಜ್‌ಕುಮಾರ್ ಅಭಿಮಾನಿಗಳು ಫ್ಲೆಕ್ಸ್, ಕಟೌಟ್‌ಗಳಿಗೆ ಕ್ಷೀರಾಭಿಷೇಕ ಮಾಡಿದ್ದಾರೆ. ಈ ವೇಳೆ ತಮ್ಮ ನೆಚ್ಚಿನ ನಟರ ಪರ ಅಭಿಮಾನಿಗಳು ಘೋಷಣೆ ಕೂಗಿ ಸಂಭ್ರಮ ವ್ಯಕ್ತಪಡಿಸಿದ್ರು.

ಕಲಬುರಗಿಯಲ್ಲಿ ‘ದಿ ವಿಲನ್’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ತ್ರಿವೇಣಿ- ಸಂಗಮ್ ಚಿತ್ರಮಂದಿರದಲ್ಲಿ ‘ದಿ ವಿಲನ್’ ಚಿತ್ರ ವೀಕ್ಷಿಸಿದ ಬಳಿಕ ಅಭಿಮಾನಿಗಳ ಪ್ರತಿಕ್ರಿಯೆ ನೀಡಿದ್ದು, ಜೋಗಿಯಲ್ಲಿ ತಾಯಿ‌ ಮಗ ಒಂದಾಗಿರಲಿಲ್ಲ, ‘ದಿ ವಿಲನ್’ನಲ್ಲಿ ತಾಯಿ-ಮಗನ ಒಂದು ಮಾಡಿದ್ದಕ್ಕೆ ಪ್ರೇಮ್‌ಗೆ ಥ್ಯಾಂಕ್ಸ್ ತಿಳಿಸಿದ್ದಾರೆ. ಅಲ್ಲದೇ ಕಿಚ್ಚ ಸುದೀಪ್, ಶಿವರಾಜ್‌ಕುಮಾರ್ ಸ್ಟೈಲಿಶ್ ಲುಕ್, ಆ್ಯಕ್ಟಿಂಗ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: conatct@firstnews.tv