‘ದಿ ವಿಲನ್​’ ಮೊದಲ ದಿನದ ಟಿಕೆಟ್​ Sold out..!

‘ದಿ ವಿಲನ್​’ ಸಿನಿಮಾ ಮುಂದಿನ ವಾರ ತೆರೆಗೆ ಬರೋಕೆ ಸಿದ್ಧವಾಗಿದೆ. ಇಂದಿನಿಂದ ಬೆಂಗಳೂರಿನಲ್ಲಿ ಬುಕ್ಕಿಂಗ್ ಆರಂಭವಾಗಿದ್ದು, ಮೊದಲ ದಿನದಲ್ಲೇ ಟಿಕೆಟ್​ ಭರ್ಜರಿಯಾಗಿ ಸೇಲ್​ ಆಗ್ತಿದೆ. ಶಿವಣ್ಣ-ಸುದೀಪ್​ ಅಭಿಮಾನಿಗಳು ಮುಗಿಬಿದ್ದು ಟಿಕೆಟ್​ ಕೊಳ್ಳುತ್ತಿದ್ದಾರೆ. ಅಲ್ಲದೇ, ಕೆಲವೆಡೆ ಈಗಾಗಲೇ ಟಿಕೆಟ್​ ಸೋಲ್ಡ್​ ಔಟ್ ಆಗಿವೆ.

ಸೋಮವಾರದಿಂದ ರಾಜ್ಯಾದ್ಯಂತ ಬುಕ್ಕಿಂಗ್​..!

‘ದಿ ವಿಲನ್​’ ಸೀಟು ಕಾಯ್ದಿರಿಸಲು ಅಭಿಮಾನಿಗಳು ತಿಂಗಳ ಹಿಂದಿಯೇ ಉತ್ಸುಕರಾಗಿದ್ದರು. ಇದೀಗ ಬೆಂಗಳೂರಿನಲ್ಲಿ ಟಿಕೆಟ್​ ಬುಕ್ಕಿಂಗ್ ಆರಂಭವಾಗಿದೆ. ಬಹುತೇಕ ಎಲ್ಲಾ ಥಿಯೇಟರ್​ಗಳಲ್ಲೂ ಮೊದಲ ಶೋ ಸೋಲ್ಡ್​ ಔಟ್ ಆಗಿದೆ. ಇಷ್ಟರಲ್ಲೇ ಮಲ್ಟಿಪ್ಲೆಕ್ಸ್​ನಲ್ಲೂ ಬುಕ್ಕಿಂಗ್ ಆರಂಭವಾಗಲಿದೆ. ಈಗಾಗಲೇ ಪಿವಿಆರ್​, ಮಲ್ಟಿಪ್ಲೆಕ್ಸ್​ ಮಾಲೀಕರೊಂದಿಗೆ ಚಿತ್ರತಂಡ ಮಾತುಕತೆ ನಡೆಸ್ತಿದೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv