‘ದಿ ವಿಲನ್​’ ಸಿನಿಮಾಗೆ ಪೈರಸಿ ಕಾಟ..! ಶಿವಣ್ಣ- ಸುದೀಪ್​ ಎಂಟ್ರಿ ಲೀಕ್..!

ಕನ್ನಡದ ಬಹುನಿರೀಕ್ಷಿತ ಸಿನಿಮಾ ‘ದಿ ವಿಲನ್’ ಇಂದು ರಾಜ್ಯಾದ್ಯಂತ ತೆರೆ ಕಂಡಿದೆ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಳ್ತಿದೆ. ಪ್ರೇಕ್ಷಕರು ಮೊದಲ ಶೋನಲ್ಲೆ ಸಿನಿಮಾದ ಫುಲ್​ ಮಾರ್ಕ್ಸ್ ಕೊಟ್ಟಿದ್ದು, ಶಿವಣ್ಣ- ಸುದೀಪ್​ ಕಾಂಬಿನೇಷನ್​ಗೆ ಜೈ ಅಂದಿದ್ದಾರೆ. ಇತ್ತ ಮೊದಲ ಶೋ ಮುಗಿಯುತ್ತಿದ್ದಂತೆ, ಪೈರಸಿ ಕಾಟ ಎದುರಾಗಿದೆ. ಕಿಡಿಗೇಡಿಗಳು ಕೆಲ ದೃಶ್ಯವನ್ನು ಚಿತ್ರೀಕರಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಶಿವಣ್ಣ- ಸುದೀಪ್​ ಎಂಟ್ರಿ ದೃಶ್ಯವನ್ನೂ ಚಿತ್ರೀಕರಿಸಿದ್ದಾರೆ.

ಗೂಂಡಾ ಕಾಯ್ದೆಯಡಿ ಶಿಕ್ಷೆ..!

‘ದಿ ವಿಲನ್​’ ಚಿತ್ರತಂಡ ವಿಡಿಯೋ ಚಿತ್ರೀಕರಿಸದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿತ್ತು. ಚಿತ್ರೀಕರಿಸಿದ್ದೇ ಆದಲ್ಲಿ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿತ್ತು. ಆದ್ರೀಗ, ಕೆಲ ಕಿಡಿಗೇಡಿಗಳು ಸೋಷಿಯಲ್ ಮೀಡಿಯಾಗಳಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಇವತ್ತು ಕೂಡ ನಿರ್ದೇಶಕ ಪ್ರೇಮ್ ಪೈರಸಿ ಮಾಡದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv