ದಿ ವಿಲನ್​​​ ಆಡಿಯೋ ರಿಲೀಸ್​ ಡೇಟ್​​ ಫಿಕ್ಸ್​..!

ದಿ ವಿಲನ್​ ಸಿನಿಮಾ ಬಗ್ಗೆ ಜನರಿಗಿದ್ದ ಕುತೂಹಲ ತಣಿಸೋ ಸಲುವಾಗಿ ಸಿನಿಮಾದ ಟೀಸರ್​ ರಿಲಿಸ್​ ಡೇಟ್​ ಅನೌನ್ಸ್​ ಮಾಡಿದ್ದಾರೆ ನಿರ್ದೇಶಕ ಪ್ರೇಮ್​​. ಇದೇ ಜೂನ್​ 28ಕ್ಕೆ ಸಿನಿಮಾದ ಟೀಸರ್​ ರಿಲೀಸ್​ ಮಾಡೋದಾಗಿ ಹೇಳಿರೋ ನಿರ್ದೇಶಕ ಪ್ರೇಮ್​ ಈಗ ಬಹುನಿರೀಕ್ಷಿತ ಆಡಿಯೋ ಲಾಂಚ್​ ಡೇಟ್​ನು ಬಹಿರಂಗ ಪಡಿಸಿದ್ದಾರೆ. ಪ್ರೇಮ್​ ಸಿನಿಮಾ ಅಂದ ತಕ್ಷಣ ಜನ ಎಕ್ಸ್‌​ಪೆಕ್ಟ್​ ಮಾಡೋದೆ ಸೂಪರ್​ ಸಾಂಗ್ಸ್​. ಪ್ರೇಮ್​​ ಸಿನಿಮಾ ರಿಲೀಸ್​ಗೂ ಮೊದಲೇ ಅವ್ರ ಚಿತ್ರದ ಹಾಡುಗಳಿಗೆ ಎಲ್ಲಿಲ್ಲದ ಡಿಮ್ಯಾಂಡ್‌ ಕ್ರಿಯೇಟ್​ ಆಗುತ್ತೆ. ಈ ಹಾಡುಗಳಿಂದ್ಲೇ ಸಿನಿಮಾಗೆ ಸಿಕ್ಕಾಪಟ್ಟೆ ಹೈಪ್​ ಸಿಗುತ್ತೆ. ಅದರಂತೆ ದಿ ವಿಲನ್​ ಸಿನಿಮಾದ ಆಡಿಯೊ ರೈಟ್ಸ್​ ಕೂಡ ದಾಖಲೆ ಬೆಲೆಗೆ ಆನಂದ್​ ಆಡಿಯೋ ಖರೀದಿಸಿದೆ. ಜನರಿಗೆ ಸಿನಿಮಾ ಮೇಲಿರೋ ನಿರೀಕ್ಷೆ, ಹಾಡುಗಳ ಮೇಲಿರೋ ಎಕ್ಸ್​​​ಪೆಕ್ಟೇಷನ್​​​ ತಣಿಸೋ ಸಲುವಾಗಿ ಅದ್ಧೂರಿಯಾಗಿ ಆಡಿಯೋ ಲಾಂಚ್​ ಮಾಡೋ ಪ್ಲಾನ್​ ಮಾಡಿಕೊಂಡಿದೆ ಆನಂದ್​ ಆಡಿಯೋ. ತಮ್ಮ ಮ್ಯೂಸಿಕ್​ ಆಲ್ಬಂನಿಂದಲೇ ಜನರನ್ನ ಥಿಯೇಟರ್​​ಗೆ ಸೆಳೆಯಬಲ್ಲ ಪ್ರೇಮ್​​. ದಿ ವಿಲನ್​ ಸಿನಿಮಾದ ಆಡಿಯೋ ಲಾಂಚ್​ ದಿನಾಂಕವನ್ನ ಟೀಸರ್​ ರಿಲೀಸ್​ ದಿನ ಅನೌನ್ಸ್​ ಮಾಡಲಿದ್ದಾರೆ. ಈ ಬಾರಿ ಒಂದೊಂದೇ ಸಾಂಗ್​​ನ ರಿಲೀಸ್​ ಮಾಡೋ ಪ್ಲಾನ್‌ನಲ್ಲಿದ್ದಾರೆ ಪ್ರೇಮ್​​. ಟೀಸರ್​ ರಿಲೀಸ್​ ಕಾರ್ಯಕ್ರಮದಲ್ಲಿ ಮೊದಲ ಸಾಂಗ್​ ರಿಲೀಸ್​ ಡೇಟ್​ ಅನೌನ್ಸ್​ ಮಾಡಲಿದ್ದಾರೆ. ಇನ್ನೂ ವರಮಹಾಲಕ್ಷ್ಮೀ ಹಬ್ಬಕ್ಕೆ ಸಿನಿಮಾ ರಿಲಿಸ್​ ಮಾಡಲು 100 ಪರ್ಸೆಂಟ್​ ಪ್ರಯತ್ನ ಮಾಡ್ತಾ ಇದ್ದಾರಂತೆ..!
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv