‘ದಿ ವಿಲನ್​’ಗಳಾಗಿ ರಾಜಣ್ಣ, ವಿಷ್ಣುದಾದಾ ಶೈನಿಂಗ್​..!

‘ದಿ ವಿಲನ್​’ ಸಿನಿಮಾದಲ್ಲಿ ಯಾರು ನಟಿಸಿದ್ದಾರೆ ಅಂದ್ರೆ, ಚಿಕ್ಕ ಮಕ್ಕಳೂ ಹೇಳ್ತಾರೆ. ಇದು ಶಿವಣ್ಣ-ಸುದೀಪ್​ ನಟನೆಯ ಸಿನಿಮಾ ಅಂತಾ. ಆದ್ರೀಗ, ಹಳೆಯ ಹುಲಿಗಳು ವಿಲನ್​ ಪೋಷಾಕು ತೊಟ್ಟಿದ್ದಾರೆ. ರಾಮ- ರಾವಣನ ಡೈಲಾಗಿನಲ್ಲಿ ಮಿಂಚುತ್ತಿದ್ದಾರೆ. ಅಂದ್ಹಾಗೆ, ವಿಲನ್ ಆ್ಯನಿಮೇಷನ್​​ ವರ್ಶನ್​ನಲ್ಲಿ ರಾಜಣ್ಣ ಮತ್ತು ವಿಷ್ಣುದಾದಾ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ವಿಲನ್​ ಸಿನಿಮಾದ ಫೀವರನ್ನು ಮತ್ತಷ್ಟು ಹೆಚ್ಚಿಸಿದೆ.

ಫ್ಯಾನ್ ಮೇಡ್ ಆ್ಯನಿಮೇಷನ್​..!

ಯುವಕರ ತಂಡವೊಂದು ‘ದಿ ವಿಲನ್​’ ಆ್ಯನಿಮೇಷನ್​ ವರ್ಶನ್​ ಸೃಷ್ಟಿಸಿದೆ. ಶಿವಣ್ಣನ ಪಾತ್ರದಲ್ಲಿ ​ಡಾ.ರಾಜ್​ಕುಮಾರ್​​, ಸುದೀಪ್​ ಪಾತ್ರದಲ್ಲಿ ವಿಷ್ಣುವರ್ಧನ್​ ಕಾಣಿಸಿಕೊಂಡಿದ್ದಾರೆ. ಡಾ.ರಾಜ್​ ‘ನಾನ್​​ ಸೈಲೆಂಟಾಗಿದ್ರೆ ರಾಮ, ವೈಲೆಂಟ್​ ಆದ್ನೊ ರಾವಣ’ ಅಂತಾ ‘ಶಬ್ದವೇಧಿ’ ಲುಕ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತೊಂದೆಡೆ ವಿಷ್ಣುವರ್ಧನ್​ ‘ಆನೆ ಬಂತೊಂದ್ ಆನೆ ಯಾವ​ ಊರ್ ಆನೆ’ ಅಂತಾ ಆಪ್ತಮಿತ್ರ ಗೆಟಪ್​ನಲ್ಲಿ ಮಿಂಚಿದ್ದಾರೆ. ಇದೇ ಆ್ಯನಿಮೇಷನ್​ ತಂಡ ‘ಕೆಜಿಎಫ್​’ ಸಿನಿಮಾದ ಆ್ಯನಿಮೇಷನ್​ ವರ್ಶನನ್ನು ರಿಲೀಸ್ ಮಾಡಿತ್ತು.

ಜೋಗಿ ಪ್ರೇಮ್ ಮೆಚ್ಚುಗೆ..!

ಅಭಿಮಾನಿಗಳು ಇಂತಹ ಟೀಸರ್​ ನಿರ್ಮಿಸಿದಕ್ಕೆ ಪ್ರೇಮ್​ ಸಂತಸ ವ್ಯಕ್ತಪಡಿಸಿದ್ದಾರೆ. ‘ನಿಜ ಈ ವಿಡಿಯೋಗಳು ಕನ್ನಡ ಚಿತ್ರಾಭಿಮಾನಿ ದೇವರುಗಳ ಐಕ್ಯತೆಯನ್ನು ತೋರಿಸ್ತಿದೆ…ಶಿವಣ್ಣನ ಅಣ್ಣಾವ್ರಿಗೆ…ಸುದೀಪ್ ಅವ್ರನ್ನ ವಿಷ್ಣು ದಾದಾಗೆ ಹೋಲಿಕೆ ಮಾಡಿ ನೀವು ತೋರಿಸುತ್ತಿರುವ ಈ ಅಭಿಮಾನಕ್ಕೆ ನನ್ನ‌ ಸಲಾಂ. ಇದೇ ಪ್ರೀತಿ‌ ಅಭಿಮಾನದಲ್ಲಿ ದಿ ವಿಲನ್ ಚಿತ್ರವನ್ನ‌ ಆದರಿಸಿ.Love You All..’ ಅಂತಾ ಟ್ವೀಟ್​ ಮಾಡಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv