ಹೆಚ್​ಡಿಕೆ ಸಿಎಂ ಆಗಿದ್ದಕ್ಕೆ ಬಾಡೂಟ ಹಾಕಿದ ಗ್ರಾಮಸ್ಥರು..!

ಚಿತ್ರದುರ್ಗ: ಹೆಚ್​.ಡಿ.ಕುಮಾರಸ್ವಾಮಿ ಸಿಎಂ ಆದರೆ ಬಾಡೂಟ ಹಾಕಿಸುವ ಹರಕೆ ಹೊತ್ತಿದ್ದ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಹೊಸಕೆರೆ ಪಾಳ್ಯದ ರೈತರು ಇಂದು ಗ್ರಾಮಸ್ಥರಿಗೆ ಭರ್ಜರಿ ಬಾಡೂಟ ಹಾಕಿಸಿದ್ದಾರೆ.

ಹೆಚ್​ಡಿಕೆ ಸಿಎಂ ಆದ ಹಿನ್ನೆಲೆ ಹೊಸಕೆರೆ ಗ್ರಾಮದ ಭೂತಪ್ಪ ಸ್ವಾಮಿಗೆ ಹರಿಕೆ ತೀರಿಸಿದ ರೈತರು, ರೈತರ ಸಂಕಷ್ಟ ದೂರವಾಗಲಿ ಉತ್ತಮ ಮಳೆ ಬೆಳೆಯಾಗಲಿ ಸರ್ವರು ಸಂತೋಷವಾಗಿರಲೆಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ. ಹಾಗೂ ಹರಕೆಯಂತೆ 3 ಕ್ವಿಂಟಾಲ್ ಕೋಳಿ ಮಾಂಸದ ಅಡುಗೆ ಮಾಡಿ ಸುತ್ತಮುತ್ತಲ ಗ್ರಾಮಸ್ಥರಿಗೆ ಬಾಡುಟ ಸವಿಯುವಂತೆ ಮಾಡಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv