ಹಲಸಿನ ವಾಸನೆಗೆ ಮನಸೋತು ಮರವೇರಿದ ಗಜರಾಜ..!

ಚಿಕ್ಕಮಗಳೂರು: ಆಹಾರ ಅರಸಿ‌ ಕಾಡಿನಿಂದ ನಾಡಿಗೆ ಬಂದ‌ ಗಜರಾಜ ತೋಟವೊಂದರಲ್ಲಿ ಹಲಸಿನ ವಾಸನೆಗೆ ಮನಸೋತು ಮರವೇರಿ ಹಲಸು ಭಕ್ಷಿಸುತ್ತಿರುವ ದೃಶ್ಯ ಅರಣ್ಯ ಸಿಬ್ಬಂದಿಯ ಮೊಬೈಲ್ ನಲ್ಲಿ ಸೆರೆಯಾಗಿದೆ.‌ ಚಿಕ್ಕಮಗಳೂರು ತಾಲೂಕಿನ‌ ಬೋಗಸೆ ಗ್ರಾಮದ ತೋಟವೊಂದಕ್ಕೆ ನುಗ್ಗಿದ‌ ಆನೆ ಹಲಸಿನ‌ ಹಣ್ಣನ್ನು ಕೀಳಲು ಮರವೇರುತ್ತಿರುವ ದೃಶ್ಯ ಎಲ್ಲರ ಮನ ಸೆಳೆಯುವಂತಿದೆ.
ಮೈ ತುಂಬಾ ಮುಳ್ಳು ತುಂಬಿಕೊಂಡಿದ್ದರೂ ಘಮ ಘಮಿಸುವ ಸುವಾಸನೆಯಿಂದ ಹಲಸಿನ‌ ಹಣ್ಣು ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಹಲಸಿನ ಹಣ್ಣಿನ ಘಮಕ್ಕೆ ಮನಸೋಲದವರೆ ಇಲ್ಲ. ಮಂಗನಿಂದ ಮಾನವನವರೆಗೆ ಎಲ್ಲರೂ ಹಲಸಿನ ಮರವೇರಿ ಹಣ್ಣು ತಿನ್ನುವುದನ್ನು ನೋಡಿರುತ್ತೀರಿ. ಆದರೆ ಭಾರಿ ಗಾತ್ರದ ಆನೆಯೂ ಕೂಡ ಪ್ರಿಯವಾದ ಹಲಸು ತಿನ್ನಲು ಮರವನ್ನೇರುತ್ತದೆ ದೃಶ್ಯ ಮನಮೋಹಕ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv