ಪೊಲೀಸ್​ ಅಧಿಕಾರಿ ಮಗನಿಂದ ವೃದ್ಧನಿಗೆ ಥಳಿತ..ಆಮೇಲೇನಾಯ್ತು

ನ್ಯೂಯಾರ್ಕ್: 71 ವರ್ಷದ ಸಿಖ್​ ವೃದ್ಧನ ಮೇಲೆ ಪೊಲೀಸ್‌ ಅಧಿಕಾರಿಯ ಪುತ್ರನೇ ಮಾರಣಾಂತಿಕ ಹಲ್ಲೆ ನಡೆಸಿ ದರೋಡೆಗೆ ಯತ್ನಿಸಿರೋ ಘಟನೆ ಕ್ಯಾಲಿಫೋರ್ನಿಯಾದ ಮಾಂಟೆಕಾದಲ್ಲಿ ನಡೆದಿದೆ. ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆ.​ 6 ರಂದು ಮಾಂಟೆಕಾ ರಸ್ತೆಯಲ್ಲಿ ವೃದ್ಧ ಸಾಹಿಬ್​ ಸಿಂಗ್ ​ನಟ್ಟ ನಡೆದುಕೊಂಡು ಹೋಗುತ್ತಿದ್ದಾಗ ಅದೇ ಮಾರ್ಗವಾಗಿ ಬಂದ 18 ವರ್ಷದ ಪುತ್ರ ಟೈರೋನ್​ ಮೆಕ್​ ಅಲಿಸ್ಟರ್​ ಮತ್ತು 16 ವರ್ಷದ ಸ್ನೇಹಿತ ಮಾರಣಾಂತಿಕವಾಗಿ ಥಳಿಸಿ ದರೋಡೆಗೆ ಯತ್ನಿಸಿದ್ದಾರೆ. ಈ ಯುವಕರ ಕೃತ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಪ್ರತ್ಯಕ್ಷದರ್ಶಿಗಳ ಮಾಹಿತಿ ಆಧರಿಸಿ ಪೊಲೀಸ್ ಅಧಿಕಾರಿ ಪುತ್ರ ಟೈರೋನ್‌ ಸೇರಿ ಇಬ್ಬರನ್ನು ಬಂಧಿಸಲಾಗಿದೆ.
ಮಗನ ಕೃತ್ಯಕ್ಕೆ ಪೊಲೀಸ್ ಅಧಿಕಾರಿ ಹೇಳಿದ್ದೇನು..?
ಮಗನ ದುಷ್ಕೃತ್ಯದ ಬಗ್ಗೆ ತಂದೆ ಫೇಸ್​ಬುಕ್​ನಲ್ಲಿ ಖಂಡಿಸಿದ್ದಾರೆ. ಇದೊಂದು ಭೀಕರ ಅಪರಾಧವಾಗಿದ್ದು ಶಂಕಿತರಲ್ಲಿ ನನ್ನ ಮಗನೂ ಇದ್ದಾನೆಂದು ಹೇಳಿಕೊಳ್ಳಲು ಅವಮಾನವಾಗುತ್ತಿದೆ. ನನ್ನ ಮಗ ಮನೆ ತೊರೆದು ಹಲವು ತಿಂಗಳುಗಳೇ ಆಗಿವೆ. ಅಲ್ಲದೇ ನಾವು ಮಕ್ಕಳಿಗೆ ಯಾವುದೇ ದ್ವೇಷ ಹಿಂಸಾಚಾರದ ಬಗ್ಗೆ ಕಲಿಸಿಲ್ಲ. ಇವನು ಈ ರೀತಿ ಮಾಡಿರುವುದರಿಂದ ಕುಟುಂಬದವರೆಲ್ಲಾ ತಲೆತಗ್ಗಿಸುವಂತಾಗಿದೆ ಎಂದು ಬರೆದುಕೊಂಡಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv