ರಸ್ತೆ ಕುಸಿತ, ಟ್ರ್ಯಾಕ್ಟರ್ ಸಿಲುಕಿ ಅವಾಂತರ..!

ಧಾರವಾಡ: ನಗರದಲ್ಲಿ ಒಂದು ವಾರದಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಕೇಶವ ನಗರದಲ್ಲಿ ರಸ್ತೆಯೊಂದು ಕುಸಿದಿದೆ. ರಸ್ತೆ ಕುಸಿತವಾಗಿದ್ದರಿಂದ ಟ್ರ್ಯಾಕ್ಟರ್‌ ಸಿಲುಕಿಕೊಂಡಿತ್ತು. ಈ ರಸ್ತೆ, ರೈಲ್ವೆ ನಿಲ್ದಾಣಕ್ಕೆ ಮಾರ್ಗ ಕಲ್ಪಿಸುತ್ತೆ. ಆದ್ರೆ ಕೇವಲ 15 ದಿನಗಳ ಹಿಂದೆಯಷ್ಟೇ ಡಾಂಬರೀಕರಣ ಮಾಡಲಾಗಿದ್ದು, ಕಳಪೆ ಕಾಮಗಾರಿಯೇ ರಸ್ತೆ ಕುಸಿತಕ್ಕೆ ಕಾರಣ ಅಂತಾ ಸ್ಥಳೀಯರು ಆರೋಪಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv