ಹರಿಯುವ ನೀರಲ್ಲಿ ಕೊಚ್ಚಿ ಹೋದ ರೈತ…!

ದಾವಣಗೆರೆ: ನೋಡ ನೋಡುತ್ತಿದ್ದಂತೆ ಹರಿಯುವ ನೀರಿನಲ್ಲಿ ರೈತರೊಬ್ಬರು ಕೊಚ್ಚಿ ಹೋದ ಘಟನೆ ಚನ್ನಗಿರಿ ತಾಲ್ಲೂಕಿನ ಲಕ್ಷೀಸಾಗರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಜನರು ಊರು ಸೇರಬೇಕಾದರೆ ಅದೇ ಚೆಕ್ ಡ್ಯಾಂ ಮೇಲೆ ನಡೆದು ಹೋಗಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಶುಕ್ರವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಬಸಪ್ಪ ಅನ್ನೋರು ಚೆಕ್ ಡ್ಯಾಂ ಮೇಲೆ ಹೋಗುವಾಗ ಅನಾಹುತ ಸಂಭವಿಸಿದೆ. ಪದೇ ಪದೇ ಅನಾಹುತಗಳು ಸಂಭವಿಸುತ್ತಿದ್ದರೂ ತಾಲೂಕು ಆಡಳಿತ ದಿವ್ಯ ನಿರ್ಲಕ್ಷ್ಯ ವಹಿಸಿದೆ ಅಂತ ಇಲ್ಲಿನ ಜನ ಆರೋಪಿಸಿದ್ದಾರೆ. ಬಸಪ್ಪ ಅವರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv