ಇವರು ತೊಡೆ ತಟ್ಟಿದ್ರು.. ಕಪ್ ನಮ್ಮದಾಯ್ತು..!

ಬೆಂಗಳೂರು: ಈ ಸಲ ಕಪ್ ನಮ್ದೆ… ಈ ಸಲ ಕಪ್ ನಮ್ದೆ… ಪ್ರತಿ ಐಪಿಎಲ್​ ಶುರುವಾದಾಗಲೂ ಬೆಂಗಳೂರು ಅಭಿಮಾನಿಗಳು ಹೇಳುವ ಮಾತಿದು.. ಅಭಿಮಾನಿಗಳು ಎಷ್ಟು ಕೇಳಿಕೊಂಡ್ರೂ ರಾಯಲ್ ಚಾಲೆಂಜರ್ಸ್​ ತಂಡ ಇದುವರೆಗೆ ಕಪ್​ ಗೆಲ್ಲಲೇ ಇಲ್ಲ. ಐಪಿಎಲ್ ನಲ್ಲಿ ಕಪ್ ಸಿಗದೇ ಹೋದ್ರೂ, ಬೆಂಗಳೂರಿಗರಿಗೆ ಐಪಿಎಲ್​ನಷ್ಟೇ ಮಹತ್ವದ ಬೇರೊಂದು ಕಪ್​ ಸಿಕ್ಕಿದೆ.. ಅದೇ ಪ್ರೊ ಕಬಡ್ಡಿ ಕಪ್​.

ಇದೇ ಮೊಟ್ಟ ಮೊದಲ ಬಾರಿಗೆ ತವರು ತಂಡ ಬೆಂಗಳೂರು ಬುಲ್ಸ್ ಪ್ರೋ ಕಬಡ್ಡಿಯಲ್ಲಿ ಚಾಂಪಿಯನ್​ ಆಗುವ ಮೂಲಕ ಕಪ್​ನ್ನ ತಮ್ಮದನ್ನಾಗಿಸಿಕೊಂಡಿದೆ. ಪ್ರೊ ಕಬಡ್ಡಿ ಸೀಜನ್ ಆರರಲ್ಲಿ ಗುಜರಾತ್ ತಂಡವನ್ನು ಮಣಿಸಿದ ಬೆಂಗಳೂರು ಬುಲ್ಸ್ ತಂಡ ಮೊದಲ ಬಾರಿಗೆ ಕಪ್ ಗೆದ್ದಿದೆ. ಆ ಮೂಲಕ ಬೆಂಗಳೂರಿಗರ ಈ ಸಲ ಕಪ್​ ನಮ್ಮದೇ ಎನ್ನುವ ಕನಸನ್ನ ನನಸು ಮಾಡಿದೆ. ಅಂದ ಹಾಗೆ, ಬೆಂಗಳೂರು ಬುಲ್ಸ್​ ಪ್ರತಿಷ್ಠಿತ ಕಪ್​ನ್ನ ಗೆಲ್ಲುವುದರ ಹಿಂದೆ ಒಂದು ಶಕ್ತಿ ಅಡಗಿದೆ.. ಆ ಶಕ್ತಿಯೇ ಬಿ.ಸಿ. ರಮೇಶ್..

ಬಿ.ಸಿ. ರಮೇಶ್ ಭಾರತೀಯ ಕಬಡ್ಡಿ ತಂಡದ ಮಾಜಿ ಆಟಗಾರ. ಹಲವು ವರ್ಷಗಳ ಕಾಲ ಭಾರತ ತಂಡವನ್ನ ಪ್ರತಿನಿಧಿಸಿದವರು. ಬಿ.ಸಿ. ರಮೇಶ್​ ನೇತೃತ್ವದಲ್ಲಿ ಭಾರತ ತಂಡ ಎರಡು ಬಾರಿ ಚಿನ್ನದ ಪದಕವನ್ನ ಗೆದ್ದಿದೆ. ಈಗ ಅದೇ ರಮೇಶ್ ಅವರು ಪ್ರೊ ಕಬಡ್ಡಿ ಸೀಸಜನ್​ ಆರರಲ್ಲಿ ಬೆಂಗಳೂರು ಬುಲ್ಸ್​ ತಂಡದ ಕೋಚ್ ಆಗಿದ್ದರು. ಅವರು ಕೋಚ್​ ಆದ ಮೊದಲ ಬಾರಿಯಲ್ಲೇ ಬೆಂಗಳೂರು ಬುಲ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆ ಮೂಲಕ ಕಪ್​ ಬೆಂಗಳೂರಿಗರದ್ದಾಗಿದೆ.

ರಮೇಶ್​ ಅವರು ಈ ಹಿಂದೆ ಇದೇ ಪ್ರೋ ಕಬಡ್ಡಿಯಲ್ಲಿ ಬೇರೆ ಬೇರೆ ತಂಡಗಳ ಕೋಚ್​ ಕೂಡ ಆಗಿದ್ದರು. ರಮೇಶ್ ಅವರ ಆಟದ ಶೈಲಿ ಇಡೀ ದೇಶದ ಕಬಡ್ಡಿ ಅಭಿಮಾನಿಗಳನ್ನ ರಂಜಿಸಿದೆ. ರಮೇಶ್ ಅವರ ಕಬಡ್ಡಿ ಆಟದ ಶೈಲಿಗೆ ಸಾಕಷ್ಟು ಸೆಲೆಬ್ರಿಟಿಗಳೇ ಫ್ಯಾನ್ಸ್​ ಆಗಿದ್ದಾರೆ. ರಾಕಿಂಗ್ ಸ್ಟಾರ್ ಯಶ್, ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಸೆಲೆಬ್ರೆಟಿಗಳೂ ಬಿ.ಸಿ. ರಮೇಶ್ ಅವರ ಅಭಿಮಾನಿಗಳಾಗಿದ್ದಾರೆ. ಈಗ ಅದೇ ಬಿ.ಸಿ. ರಮೇಶ್​ ಬೆಂಗಳೂರಿಗೆ ಕಪ್​ನ್ನ ಗೆಲ್ಲಿಸಿಕೊಟ್ಟಿದ್ದಾರೆ.

ಬೆಂಗಳೂರು ಬುಲ್ಸ್ ಚಾಂಪಿಯನ್ ಆದ ಬಳಿಕ ತಂಡದ ಕೋಚ್​ ಬಿ.ಸಿ. ರಮೇಶ್​ ಫಸ್ಟ್ ನ್ಯೂಸ್ ಜೊತೆಯಲ್ಲಿ ಮಾತನಾಡಿದ್ದಾರೆ. ತಮ್ಮ ಅನುಭವಗಳನ್ನ ಹಂಚಿಕೊಂಡಿದ್ದಾರೆ. ಅವರ ಕಂಪ್ಲೀಟ್ ಸಂದರ್ಶನದ ಲಿಂಕ್ ಇಲ್ಲಿದೆ.