ಫಸ್ಟ್‌ ನೈಟ್​​ ವೇಳೆ ವಧು ಕಿಡ್ನ್ಯಾಪ್ ಪ್ರಕರಣ ಸಿಕ್ಕೇ ಬಿಡ್ತು ಫುಲ್​ ಟ್ವಿಸ್ಟ್..!

ಕೊಪ್ಪಳ: ನಾನು ಕಿಡ್ನಾಪ್ ಆಗಿಲ್ಲ, ನಾನೇ ಹೋಗಿದ್ದೇನೆ ಎಂದು ಕಿಡ್ನಾಪ್ ಆಗಿದ್ದ ನವವಧು ಹೇಳಿಕೆ ನೀಡುವ ಮೂಲಕ ತಮ್ಮ ಕಿಡ್ನಾಪ್​ ಪ್ರಕರಣಕ್ಕೆ ಭಾರೀ ಟ್ವಿಸ್ಟ್ ನೀಡಿದ್ದಾರೆ. ನನಗೆ ಮಲ್ಲನಗೌಡನ ಜೊತೆ ಬಲವಂತವಾಗಿ ಎರಡನೇ ಮದುವೆ ಮಾಡಲಾಗಿತ್ತು. ಆದರೆ ನಾನು ಅಂಜುಕುಮಾರ್ ಜೊತೆ ಮೊದಲೇ ಮದುವೆಯಾಗಿದ್ದೆ ಎಂದು ನವವಧು ಗಾಯತ್ರಿ ಹೇಳಿದ್ದಾರೆ.

ಗಾಯತ್ರಿ ಅಂಜುಕುಮಾರ್‌ ಜೊತೆ ಜಿಲ್ಲಾ ಎಸ್​ಪಿಗೆ ಮನವಿ ನೀಡಲು ಬಂದ ಸಮಯದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು,  ನಾನು ಮತ್ತು ಅಂಜುಕುಮಾರ್‌ ಒಂದು ವರ್ಷದಿಂದ ಲವ್​ ಮಾಡುತ್ತಿದ್ದೆವು. ಈ ವಿಷಯವನ್ನ ನಾನು, ನನ್ನ ಮನೆಯಲ್ಲಿ ಅಮ್ಮನಿಗೆ ಹೇಳಿದ್ದೆ. ಅವರು ಮುಂದೆ ನೋಡುವುದಾಗಿ ಹೇಳಿ.. ಬೇರೆ ಹುಡುಗನನ್ನು ಹುಡುಕಲು ಪ್ರಾರಂಭ ಮಾಡಿದರು. ಆಗ ನಾನು ಅಂಜುಕುಮಾರ್​ಗೆ ಕಾಲ್​ ಮಾಡಿ ಮನೆಯಲ್ಲಿ ನನಗೆ ಹೀಗೆ ಬೇರೆ ಮದುವೆ ಮಾಡುತ್ತಿದ್ದಾರೆ ಎಂದು ಹೇಳಿದೆ.

ಹಾಗಾಗಿ ಅಂಜುಕುಮಾರ್‌ ನನ್ನನ್ನು 6 ತಿಂಗಳ ಹಿಂದೆ ಮದುವೆ ಆಗಿದ್ದರು. ಇದು ಮನೆಯಲ್ಲಿ ಗೊತ್ತಿರಲಿಲ್ಲ, ಆದರೆ ಕೆಲ ದಿನಗಳ ಬಳಿಕ ಗೊತ್ತಾಯಿತ್ತು. ಆಗ ಮನೆಯವರು ನನಗೆ ಹೊಡೆದು ಬಡೆದು ಮಲ್ಲನಗೌಡ ಜೊತೆ ಮದುವೆ ಮಾಡಿದರು. ಇದು ನನಗೆ ಒಪ್ಪಿಗೆ ಇರಲಿಲ್ಲ, ಹಾಗಾಗಿ ನಾನು ಸೆಪ್ಟೆಂಬರ್‌ 24ರ ರಾತ್ರಿ ಅಂಜುಕುಮಾರ್​ಗೆ ಕರೆದುಕೊಂಡು ಹೊಗಲು ಹೇಳಿದ್ದೆ ಎಂದು ಗಾಯತ್ರಿ ಹೇಳಿದ್ದಾರೆ.

ಜಿಲ್ಲೆಯ ಕಾರಟಗಿ ತಾಲೂಕಿನ ಗುಡೂರು ಗ್ರಾಮದ ಗಾಯತ್ರಿ ಹಾಗೂ ಮಲ್ಲನಗೌಡರ ಮದುವೆ ಸೆಪ್ಟೆಂಬರ್‌ 24 ರಂದು ನಡೆದಿತ್ತು. ಕಳೆದ ಅಕ್ಟೋಬರ್ 7ರಂದು ವಧುವಿನ ಮನೆಯಲ್ಲಿ ಫಸ್ಟ್‌ ನೈಟ್‌ ಇತ್ತು. ವಧು ಗಾಯತ್ರಿ ಶೌಚಾಲಯಕ್ಕೆಂದು ಹೊರಬಂದಿದ್ದಾಳೆ. ಈ ವೇಳೆ ಅಂಜುಕುಮಾರ್‌ ರೆಡ್ಡಿ ಸೇರಿದಂತೆ 6 ಜನರ ಯುವಕರ ಗುಂಪು ಆಕೆಯನ್ನ ಅಪಹರಿಸಿತ್ತು ಎನ್ನಲಾಗಿತ್ತು.
ಮಲ್ಲನಗೌಡ ಕಾರಟಗಿ ಪೊಲೀಸ್‌ ಠಾಣೆಯಲ್ಲಿ ನನ್ನ ಪತ್ನಿಯನ್ನು ಅಂಜುಕುಮಾರ್‌ ರೆಡ್ಡಿ ಸೇರಿದಂತೆ 6 ಜನರ ಯುವಕರ ಗುಂಪು ಕಿಡ್ನಾಪ್ ಮಾಡಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv