ಜಯಲಲಿತಾ ಪಾತ್ರದಲ್ಲಿ ನಿತ್ಯಾ ಮೆನನ್‌ ಕಂಡದ್ದು ಹೀಗೆ..!!!

ತಮಿಳುನಾಡಿನ ಮಾಜಿ ಸಿಎಂ ದಿವಂಗತ ಜಯಲಲಿತಾ ಅವರ ಜೀವನಾಧಾರಿತ ಚಿತ್ರ ಬರ್ತಿರೋದು ಗೊತ್ತಿರೋ ವಿಷ್ಯವೇ. ಪ್ರಿಯದರ್ಶಿನಿ ನಿರ್ದೇಶನದಲ್ಲಿ ಮೂಡಿಬರ್ತಿರೋ ಜಯಲಲಿತಾ ಬಯೋಪಿಕ್‌ ‘ದಿ ಐರನ್ ಲೇಡಿ’ ಸಿನಿಮಾದಲ್ಲಿ ಜಯಲಲಿತಾ ಪಾತ್ರಕ್ಕೆ ಆಯ್ಕೆಯಾಗಿದ್ದು ಪ್ರಚಂಡ ಪ್ರತಿಭೆ ನಿತ್ಯಾ ಮೆನನ್. ಪುರುಚ್ಛಿ ತಲೈವಿಯಾದ ಮೇಲೆ ತೆರೆಮೇಲೆ ನಿತ್ಯಾಮನೆನ್ ಹೇಗೆ ಕಾಣ್ತಾರೆ ಅನ್ನೋ ಕುತೂಹಲದ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಚಿತ್ರದ ನಿತ್ಯಾಮೆನನ್‌ರ ಫಸ್ಟ್‌ ಲುಕ್‌ ರಿವೀಲ್‌ ಆಗಿದ್ದು ನಿತ್ಯಾ ನಿಜಕ್ಕೂ ತೂಕದ ಮಹಿಳೆಯಾಗಿದ್ದಾರೆ.
ಥೇಟ್‌ ಜಯಲಲಿತಾರಂತೆಯೇ ಕಾಣ್ತಾರೆ ನಿತ್ಯಾ..!
ಸಿನಿಮಾದ ಪೋಸ್ಟರ್ ನೋಡಿದೋರಿಗೆ ಯಾವ ಮಟ್ಟಿಗೆ ಕನ್ಫೂಷನ್ ಆಗುತ್ತೆ ಅಂದ್ರೆ, ಇವ್ರು ಜಯಲಲಿತಾನೇನಾ ಅಥ್ವಾ ಬೇರೆಯವ್ರಾ?ಅನ್ನಿಸುತ್ತೆ. ನಿತ್ಯಾ ಮೆನನ್ ಅಂತ ಗೊತ್ತಾದ್ಮೇಲಂತೂ ಅಬ್ಬಾ! ಪಾತ್ರದ ಲುಕ್‌ಗಾಗಿ ನಿತ್ಯಾ ಮೆನನ್‌ರ ಡೆಡಿಕೇಶನ್ ಕಾಣಿಸುತ್ತೆ. ಹಣೆಗೆ ದೊಡ್ಡ ಬೊಟ್ಟಿಟ್ಟುಕೊಂಡ, ದುಂಡುಮೈ, ತುಂಬುಮೊಗದ ಹೆಣ್ಣುಮಗಳ ಲುಕ್‌ನಲ್ಲಿ ನಿತ್ಯಾ ಥೇಟ್ ಜಯಲಲಿತಾರಂತೆ ಕಾಣಿಸಿಕೊಂಡಿದ್ದಾರೆ. ಈ ಪಾತ್ರಕ್ಕಾಗಿ ದಿನಗಟ್ಟಲೆ ಜಯಲಲಿತಾ ಅವರ ಹಾವ ಭಾವಗಳನ್ನು ಅಭ್ಯಸಿಸಿರೋ ನಿತ್ಯಾ ಜಯಲಲಿತಾ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಲು ಸಿದ್ಧರಾಗಿದ್ದಾರೆ. ತೂಕವೂ ಹೆಚ್ಚಾಗಿ, ಅವರು ತೂಕದ ಮಹಿಳೆಯಾಗಿ ಕಾಣಿಸಿಕೊಂಡಿರುವುದು ಪೋಸ್ಟರ್‌ನಲ್ಲಿ ಸ್ಪಷ್ಟವಾಗಿದೆ.
ಮೊದಲು ನಟಿ, ನಂತ್ರ ರಾಜಕಾರಣಿಯಾಗಬೇಕಿದೆ ನಿತ್ಯ..!
ಆರಂಭದಲ್ಲಿ ಜನಪ್ರಿಯ ಚಿತ್ರನಟಿಯಾಗಿದ್ದ ಜಯಲಲಿತಾ ಬಳಿಕ ರಾಜಕಾರಣಕ್ಕಿಳಿದು ಅಲ್ಲಿ ಸಂಚಲನ ಮೂಡಿಸಿದ ಬಗೆಯನ್ನು ಈ ಚಿತ್ರ ಪ್ರತಿಫಲಿಸಲಿದೆ. ಚಿತ್ರನಟಿ ಹಾಗೂ ರಾಜಕಾರಣಿ ಪಾತ್ರಗಳೆರಡನ್ನೂ ನಿತ್ಯಾ ನಿಭಾಯಿಸಬೇಕಿರುವುದರಿಂದ ಹೆಚ್ಚಿನ ಡೆಡಿಕೇಶನ್ ಅನಿವಾರ್ಯ. ಜಯಲಲಿತಾ ಅವರ ಸಿನಿರಂಗದ ಪಯಣ, ನಂತ್ರ ರಾಜಕೀಯ ನಾಯಕಿಯಾಗಿ ಸವೆಸಿದ ಕಠಿಣ ಹಾದಿ ಹಾಗೂ ಜೀವನದ ಕೊನೆಯ ದಿನಗಳನ್ನ ಆಸ್ಪತ್ರೆಯಲ್ಲಿ ಕಳೆದದ್ದು ಹೀಗೆ, ‘ಜಯಲಲಿತಾ ಅವರ ಎಳವೆಯಿಂದ ಅವರು ಕೊನೆಯುಸಿರೆಳೆಯುವವರೆಗಿನ ವಿವರಗಳು ಸಿನಿಮಾದಲ್ಲಿರುತ್ತದೆ. ಪೋಸ್ಟರ್‌ ನೋಡ್ತಿದ್ರೆ, ನಿತ್ಯಾ ಅದನ್ನು ಸಮರ್ಪಕವಾಗಿಯೇ ನಿರ್ವಹಿಸಿದಂತಿದೆ. ಜಯಲಲಿತಾ ಅವರ ಪಾತ್ರದಲ್ಲಿ ನಟಿಸೋಕೆ ಹಲವು ನಟಿಯರು ಹಿಂದೇಟು ಹಾಕಿದ್ರೂ, ನಿತ್ಯಾ ಮಾತ್ರ ಖುಷಿಯಿಂದ ಒಪ್ಪಿದ್ರು ಅಂತಾರೆ ಡೈರೆಕ್ಟರ್ ಪ್ರಿಯದರ್ಶಿನಿ.
ಜಯಲಲಿತಾ ಅವರ 5 ಬಯೋಪಿಕ್‌ಗಳಲ್ಲಿ ದಿ ಐರನ್‌ ಲೇಡಿ ಮೊದಲು..!
ಅಂದ್ಹಾಗೆ, ಲಕ್ಷಾಂತರ ಅಭಿಮಾನಿಗಳ ಪುರುಚ್ಛಿ ತಲೈವಿ ಜೀವನವೇ ಹಲವು ಮಜಲುಗಳ, ಏಳುಬೀಳುಗಳ, ವರ್ಣರಂಜಿತ ಬದುಕು. ಇದು ಬೆಳ್ಳಿ ತೆರೆಮೇಲೆ 5 ಬೇರೆ ಬೇರೆ ಚಿತ್ರಗಳ ರೂಪದಲ್ಲಿ ಅನಾವರಣಗೊಳ್ಳಲಿದೆ. ಇದ್ರಲ್ಲಿ ಮೊದಲ ಬಯೋಪಿಕ್ ಪ್ರಿಯದರ್ಶಿನಿ ನಿರ್ದೇಶನದಲ್ಲಿ ಮೂಡಿಬರ್ತಿರೋ ದಿ ಐರನ್ ಲೇಡಿ ಸಿನಿಮಾ. ಈ ಚಿತ್ರವನ್ನ ಪೇಪರ್ ಟೇಲ್ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿದ್ದು ಮುಂದಿನ ವರ್ಷ, ಫೆಬ್ರವರಿ 24ರಂದು ದಿವಂಗತ ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಹುಟ್ಟುಹಬ್ಬದ ದಿನದಂದು ರಿಲೀಸ್‌ ಆಗೋ ಸಾಧ್ಯತೆಗಳಿವೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv