3 ಮೆದುಳುಗಳು, ಒಂದು ನೆಟ್​​ವರ್ಕ್​​​: ಅಸಾಧ್ಯ ಸಾಧ್ಯವಾಗಿಸಿದ್ರು ವಿಜ್ಞಾನಿಗಳು…!

ನಿಮ್ಮ ಕುಟುಂಬಸ್ಥರಿಗೆ, ಸ್ನೇಹಿತರಿಗೆ ಅಥವಾ ಸಹೋದ್ಯೋಗಿಗಳಿಗೆ ಮೆಸೇಜ್​ ಅಥವಾ ಕರೆ ಮಾಡಿ ಸಾಕಾಗಿದೆಯಾ? ನೀವು ಹೇಳಬೇಕು ಅಂತಿರೋದನ್ನ ನೇರವಾಗಿ ಅವರ ಮೆದುಳಿಗೇ ತಲುಪಿಸುವಂತಿದ್ರೆ ಹೇಗಿರುತ್ತೆ? ಊಹಿಸಿಕೊಳ್ಳಿ. ಇದನ್ನ ಈಗ ನಿಜವಾಗಿಸೋಕೆ ಹೊರಟಿದ್ದಾರೆ ವಿಜ್ಞಾನಿಗಳು.

ಮುಂದಿನ ದಿನಗಳಲ್ಲಿ ಬ್ರೇನ್​​ ಟು ಬ್ರೇನ್​ ಸೋಷಿಯಲ್​ ನೆಟ್​​ವರ್ಕ್​​​​​ ಅನ್ನೋ ಪರಿಕಲ್ಪನೆ ಸಾಕಾರವಾಗಬಹುದು. ಈ ಹೊಸ ಸಿಸ್ಟಮ್​​​​​ ಆಧುನಿಕ ಬ್ರೇನ್​​​ ಸ್ಕ್ಯಾನಿಂಗ್​ ಸಾಧನಗಳನ್ನ ಬಳಸಿಕೊಂಡು, ಜನರು ಟೆಲಿಪತಿ ಮೂಲಕ ಪರಸ್ಪರ ಸಂವಹನ ನಡೆಸಲು ಸಾಧ್ಯವಾಗುವಂತೆ ಮಾಡುತ್ತದೆ.

ಬ್ರೇನ್​ನೆಟ್​​ ಎಎಜಿ( ಎಲೆಕ್ಟ್ರೋ ಎನ್ಸೆಫಾಲೋಗ್ರಾಂ)ಸೆನ್ಸಾರ್​ಗಳನ್ನ ಬಳಸಿ ಜನರ ತಲೆಯಲ್ಲಿರುವ ಅಲೋಚನೆಯನ್ನು ಓದುತ್ತದೆ. ಹಾಗೇ ಟ್ರಾನ್ಸ್​ಕ್ರಾನಿಕಲ್​​​ ಮ್ಯಾಗ್ನೆಟಿಕ್​ ಸ್ಟಿಮುಲೇಷನ್​ ಸಹಾಯದಿಂದ ಸರಳವಾದ ಸಿಗ್ನಲ್​ಗಳನ್ನು ಜನರ ತಲೆಗೆ ಟ್ರಾನ್ಸ್​ಮಿಟ್​ ಮಾಡುತ್ತದೆ. ಈ ನಿಟ್ಟಿನಲ್ಲಿ ವಿಜ್ಞಾನಿಗಳು ಸದ್ಯ ಪ್ರಯೋಗದಲ್ಲಿ ತೊಡಗಿದ್ದಾರೆ. ಸಂಶೋಧಕರು ತಮ್ಮ ಪ್ರಯೋಗಕ್ಕಾಗಿ ಮೂರು ಜನರ ತಂಡವನ್ನು ಬಳಸಿಕೊಂಡಿದ್ದರು. ಅವರಲ್ಲಿ ಇಬ್ಬರು ಸೆಂಡರ್ಸ್​ ಮತ್ತೊಬ್ಬ ರಿಸೀವರ್​. ಈ ಮೂವರ ನಡುವೆ ಗೇಮ್​ ಆಡಿಸಲಾಗಿತ್ತು. ಇಬ್ಬರು ಸೆಂಡರ್ಸ್ ಎಲ್​​ಇಡಿಯನ್ನು ದಿಟ್ಟಿಸಿ ನೋಡುತ್ತಾ ಅವರ ಮೆದುಳು ನಿರ್ದಿಷ್ಟ ಸಿಗ್ಲ್​ಗಳನ್ನ ಹೊರ ಸೂಸುತ್ತದೆ, ಈ ಉತ್ತರಗಳನ್ನ ಅವರಿಬ್ಬರು ಟ್ರಾನ್ಸ್​​ಮಿಟ್​ ಮಾಡುತ್ತಾರೆ. ರಿಸೀವರ್​ ಆದ ಮೂರನೇ ವ್ಯಕ್ತಿ ಅವರ ಉತ್ತರಗಳನ್ನ ಸ್ವೀಕರಿಸಿ ಗೇಮ್​ ಆಡಿಸಲಾಗಿತ್ತು. ಸೆಂಡರ್​​ಗಳಲ್ಲೊಬ್ಬ ಬೇಕಂತಲೇ ತಪ್ಪು ಸೂಚನೆಗಳನ್ನ ನೀಡಬೇಕಿತ್ತು. ಇದರಿಂಧ ರಿಸೀವರ್​ ಯಾವ ಸೆಂಡರ್​​ ಅನ್ನು ನಂಬಬೇಕು ಅನ್ನೋದನ್ನ ನಿರ್ಧರಿಸಬೇಕು.

ಈ ಬಗ್ಗೆ ಸಂಶೋಧಕರೊಬ್ಬರು ಪ್ರತಿಕ್ರಿಯೆ ನೀಡಿದ್ದು, ರೀಸಿವರ್​​ಗಳು ತಮ್ಮ ಮೆದುಳಿಗೆ ಟ್ರಾನ್ಸ್​ಮಿಟ್​ ಆದ ಮಾಹಿತಿಯನ್ನು ಆಧರಿಸಿ ಯಾವ ಸೆಂಡರ್​ ಹೆಚ್ಚು ನಂಬಿಕಸ್ಥ ಎನ್ನುವುದನ್ನು ನಿರ್ಧರಿಸಲು ಸಾಧ್ಯವಾಗಿದ್ದು ಈ ಪ್ರಯೋಗದಲ್ಲಿ ಕಂಡುಬಂದಿದೆ. ಈ ಫಲಿತಾಂಶದಿಂದ ಭವಿಷ್ಯದಲ್ಲಿ ಬ್ರೇನ್​​ ಟು ಬ್ರೇನ್​​ ಸಂವಹನ ನಡೆಸುವಂತಹ ಸಾಧ್ಯತೆಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ. ಮುಂದೊಂದು ದಿನ ಜನರ ಗುಂಪು ಒಟ್ಟಿಗೆ ಕೆಲಸ ಮಾಡುತ್ತಾ ಸಮಸ್ಯೆಗಳನ್ನ ಬಗೆಹರಿಸೋಕೆ ಈ ಬ್ರೇನ್​​ನೆಟ್​​ ಬಳಸಿಕೊಳ್ಳಬಹುದು ಎಂದು ಸಂಶೋಧಕರು ನಂಬಿದ್ದಾರೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv