ತುಂಗಾ ನದಿಯಲ್ಲಿ ಕೊಚ್ಚಿಹೋದ ರೈತನ ಮೃತದೇಹ ಪತ್ತೆ

ಚಿಕ್ಕಮಗಳೂರು: ಕೆಲವು ದಿನಗಳಿಂದ ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಜೋರಾಗಿದೆ. ಕಳೆದ ಬುಧವಾರ ತುಂಗಾ ನದಿ ತೀರದ ಬಳಿ ನಾಪತ್ತೆಯಾಗಿದ್ದ ಉಮೇಶ್ ಅವರು ತುಂಗಾ ನದಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿರಬಹುದು ಎಂದು ಶಂಕಿಸಲಾಗಿತ್ತು. ಇದರ ಬೆನ್ನಲ್ಲೇ, ಇಂದು ಶೃಂಗೇರಿ ಸಮೀಪದ ನೆಮ್ಮಾರು ಗ್ರಾಮದ ತುಂಗಾ ತೀರದ ಬಳಿ ಅವರ ಮೃತದೇಹ ಪತ್ತೆಯಾಗಿದೆ.

ತೋಟದಲ್ಲಿ ತುಂಗಾ ನದಿಯ ನೀರು ತುಂಬಿದೆ ಎಂದು ನೋಡಿಕೊಂಡು ಬರಲು ತೆರಳಿದ್ದ ಉಮೇಶ್​ ಕಾಣೆಯಾಗಿದ್ದರು. ಅವರು ತುಂಗಾ ನದಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿರಬಹುದು ಎಂಬ ಶಂಕೆ ಮೇಲೆ ಎನ್​ಡಿಅರ್​ಎಫ್ ಸಿಬ್ಬಂದಿ ಕಾರ್ಯಚರಣೆ ನಡೆಸಲು ಪ್ರಾರಂಭಿಸಿದ್ದರು. 75 ಗಂಟೆಗಳ ಕಾರ್ಯಚರಣೆಯ ಬಳಿಕ ಉಮೇಶ್ ಮೃತದೇಹ ಪತ್ತೆಯಾಗಿದೆ. ತುಂಗಾ ನದಿ ತೀರದ ಬಂಡೆಗೆ ಮೃತದೇಹ ಸಿಕ್ಕಿ ಹಾಕಿಕೊಂಡಿತ್ತು ಎಂದು ತಿಳಿದುಬಂದಿದೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv