ಕಟ್ಟಡ ದುರಂತ: ಮೃತಪಟ್ಟ ಬಾಲಕಿ ನೆನೆದು ಕಣ್ಣೀರಿಟ್ಟ ಜಿಲ್ಲಾಧಿಕಾರಿ

ಧಾರವಾಡ: ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಕಣ್ಣೀರು ಹಾಕಿದ ಘಟನೆ ನಡೆದಿದೆ. ಇವತ್ತು ಕಾರ್ಯಾಚರಣೆ ಮಾಡಿದ ಸಿಬ್ಬಂದಿಗೆ ಕೃತಜ್ಞತೆ ಅರ್ಪಿಸುವ ವೇಳೆ, ದುರಂತದಲ್ಲಿ ಮಡಿದ 8 ವರ್ಷದ ಬಾಲಕಿ ದಿವ್ಯಾ ಸಾವು ನೆನೆದು ಕಣ್ಣೀರು ಹಾಕಿದರು. ಕಾರ್ಯಾಚರಣೆ ವೇಳೆಯ ಕೆಲ ಘಟನೆಗಳನ್ನ ಭಾವುಕರಾದ ದೀಪಾ, ಪ್ರೇಮಾ ಉಣಕಲ್ ಎಂಬ ಮಹಿಳೆ ಜೀವಂತವಾಗಿ ಬದುಕಿ ಬಂದಿದ್ದಳು. ಆದ್ರೆ ಆಕೆಯ ಮಗಳು ಮಾತ್ರ ಮೃತಪಟ್ಟಿದ್ದಳು ಅಂತ ದುಃಖ ತಡೆದುಕೊಳ್ಳಲಾಗದೇ ಕಣ್ಣೀರು ಹಾಕಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv