ವಿದ್ಯುತ್​​ ತಂತಿ ತಗುಲಿ ವ್ಯಕ್ತಿ ಸಾವು

ಚಿತ್ರದುರ್ಗ: ನಿರ್ಮಾಣ ಹಂತದ ಮನೆ ಕಟ್ಟಡಕ್ಕೆ ನೀರು ಹೊಡೆಯುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ತಾಲೂಕಿನ ಇಸಾಮುದ್ರ ಗ್ರಾಮದಲ್ಲಿ ನಡೆದಿದೆ. ಮಾರೇಶ್ (32) ವಿದ್ಯುತ್​ ಲೇನ್ ತಗುಲಿ ಮೃತಪಟ್ಟ ನತದೃಷ್ಟ. ಇಂದು ಬೆಳಗ್ಗೆ ಮನೆಯ ಕಟ್ಟಡಕ್ಕೆ ನೀರು ಹೊಡೆಯಲು ಮುಂದಾದಾಗ ಈ ಘಟನೆ ನಡೆದಿದ್ದು, ಮನೆ ಮಾಳಿಗೆಯ ಸಮೀಪವೇ ವಿದ್ಯುತ್ ಲೇನ್ ಇರುವುದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv