ದುರಂತಕ್ಕೆ ಕಾರಣರಾದ ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಲಿದೆ: ದೀಪಾ ಚೋಳನ್

ಧಾರವಾಡ: ನಗರದಲ್ಲಿ ನಡೆದ ಕಟ್ಟಡ ದುರಂತ ಪ್ರಕರಣಕ್ಕೆ ಸಂಭಂದ ಪಟ್ಟಂತೆ  ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಸುದ್ದಿ ಗೋಷ್ಠಿ  ನಡೆಸಿದ್ರು. ಇದೇ ವೇಳೆಯಲ್ಲಿ ಮಾತನಾಡಿದ ಅವರು, 19ರಂದು ಮಧ್ಯಾಹ್ನ 3.30 ಸುಮಾರಿಗೆ ಈ ದುರ್ಘನೆ ನಡೆದಿತ್ತು. ಎನ್ ಡಿ ಆರ್ ಎಫ್, ಎಸ್ ಟಿ ಆರ್ ಎಪ್ ಹಾಗೂ ರಾಜ್ಯದ ಅಗ್ನಿಶಾಮಕದಳ ಸಿಬ್ಬಂದಿ ಮತ್ತು ಜೆಸಿಬಿ, ಇಟಾಚಿ, ಕ್ರೈನ್ ಗಳನ್ನ ಬಳಿಸಿಕೊಂಡು ರಕ್ಷಣ ಕಾರ್ಯತತ್ಪರರಾದೆವು. ಕಟ್ಟಡದ ಅವಶೇಷಗಳಿಡಿ ಸಿಲುಕಿದ್ದವರನ್ನ ತೆರವು ಕಾರ್ಯಚರಣೆ ಕೈಗೊಂಡು 57 ಜನರ ಜೀವಂತ ರಕ್ಷಣೆಮಾಡಿದ್ದೇವೆ. ಇದರಲ್ಲಿ ೧೯ ಜನ ಮೃತಪಟ್ಟಿದ್ದಾರೆ.  ಈ ಕಾರ್ಯಚರಣೆಯಲ್ಲಿ ಧಾರವಾಡದ ಸಮಾನ್ಯ ಜನರೂ ಕೂಡ  ಬಿಲ್ಡಿಂಗ್ ಬಿದ್ದ ತಕ್ಷಣ  ಕಟ್ಟಡದಲ್ಲಿ ಸಿಲುಕಿದ ಜನರನ್ನ ರಕ್ಷಣೆ ಮಾಡುವಲ್ಲಿ ಸಹಕಾರ ತೋರಿದ್ದಾರೆ. ನಾನು ಈ ಸಮಯದಲ್ಲಿ ಧಾರವಾಡದ ಜನತೆಗೆ ಕೃತಜ್ಞತೆ ಸಲ್ಲಿಸುತ್ತೆನೆ. ಕಾರ್ಯಚರಣೆ ಯಲ್ಲಿ ಗೃಹರಕ್ಷಕ ದಳ ಕೇಂದ್ರದ ಎನ್ ಡಿ ಅರ್ ಎಪ್ ಎನ್ ಟಿ ಆರ್ ಎಪ್ ತಂಡದಿಂದ ಈ ಕಾರ್ಯಚರಣೆ ಉತ್ತಮವಾಗಿ ಯಶಸ್ವಿ ಕಾರ್ಯಚರಣೆ ಮಾಡಿದ್ದಾರೆ. ಈ ಕಾರ್ಯಚರಣೆ ಯಲ್ಲಿ ಭಾಗಿಯಾಗಿದ್ದ ಜಿಲ್ಲಾಢಳಿತದ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಆರೋಗ್ಯ ಇಲಾಖೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೆನೆ ಎಂದರು. ಅಲ್ಲದೇ, ಈ ಪ್ರಕರಣಕ್ಕೆ ಸಂಭಂದಪಟ್ಟಂತೆ ಭಾವುಕರಾಗಿ ಮಾತನಾಡಿದ ಜಿಲ್ಲಾಧಿಕಾರಿ ದೀಪಾ ಚೋಳನ್,  ಪ್ರೇಮಾ ಎಂಬ ಮಹಿಳೆ ಜೀವಂತ ಬಂದಾಗಿನ ಸನ್ನಿವೇಶ ಹೇಳುವ‌ ವೇಳೆ ಕಣ್ಣೀರಿಟ್ಟರು. ಹಾಗೂ ಈ ದುರಂತಕ್ಕೆ ಕಾರಣರಾದ ಆರೋಪಿಗಳಿಗೆ ಹಾಗೂ ಅಧಿಕಾರಿಗಳಿಗೆ ತಕ್ಕ ಶಿಕ್ಷೆ ಆಗಲಿದೆ. ಅವಳಿ ನಗರದಲ್ಲಿ ಅಕ್ರಮವಾಗಿ ಮತ್ತು ಕಳಪೆ ಗುಣಮಟ್ಟದ ಕಾಮಾಗರಿಯಿಂದ ತಲೇ ಎತ್ತಿರುವ ಕಟ್ಟಡಗಳ ಬಗ್ಗೆ ಮಾಹಿತಿ ಪಡೆಯಲು ಒಂದು ಟೀಮ್ ರಚನೆ ಮಾಡಲಾಗುತ್ತದೆ ಎಂದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv