ಸಮ್ಮಿಶ್ರ ಸರ್ಕಾರ ಕುಂಟರು ಕುರುಡರನ್ನು ಹೊತ್ತೊಯ್ಯುತ್ತಿರುವಂತಿದೆ- ಗೋವಿಂದ ಕಾರಜೋಳ

ಬೆಂಗಳೂರು: ಸರ್ಕಾರ ಕುಂಟರು ಕುರುಡರನ್ನು ಹೊತ್ತೊಯ್ಯುತ್ತಿರುವಂತಿದೆ ಎಂದು ಬಿಜೆಪಿ ಶಾಸಕ ಗೋವಿಂದ ಕಾರಜೋಳ ಲೇವಡಿ ಮಾಡಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ನೀಡುತ್ತಿದ್ದ ಅಕ್ಕಿ ಪ್ರಮಾಣವನ್ನ 7 ಕೆಜಿಯಿಂದ, ಇದೀಗ 5 ಕೆಜಿಗೆ ಇಳಿಸಿದ್ದೀರಿ. ನಿಮಗೆ ಅನ್ನಭಾಗ್ಯ ಯೋಜನೆಯ ಉದ್ದೇಶ ಗೊತ್ತಿದೆಯಾ? ಅಂತ ಪ್ರಶ್ನಿಸಿದ್ರು. ರಾಜ್ಯದಲ್ಲಿ ಬಡ ಕುಟುಂಬದವರು ಹಸಿವಿನಿಂದ ಇರಬಾರದೆಂದು ಸಿದ್ದರಾಮಯ್ಯನವರು ಅನ್ನಭಾಗ್ಯ ಯೋಜನೆಯಡಿ 7 ಕೆ.ಜಿ ಅಕ್ಕಿ ನೀಡಲಾಗುತ್ತಿತ್ತು. ಯೋಜನೆಯ ಮಹತ್ವ ಗೊತ್ತಿಲ್ಲದೇ.. 2 ಕೆಜಿ ಅಕ್ಕಿ ಕಡಿಮೆ ಮಾಡಿದ್ದೀರಿ. ನಿಮ್ಮ ಸರ್ಕಾರದ ಈ ಧೋರಣೆಗೆ ಏನು ಹೇಳಬೇಕು ಹೇಳಿ? ಎಂದು ಸಮ್ಮಿಶ್ರ ಸರ್ಕಾರ ವಿರುದ್ಧ ಚಾಟಿ ಬೀಸಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv