ಸಿಎಂ U ಟರ್ನ್, ಮೊದಲಿನಂತೆ ಮಾಧ್ಯಮಗಳಿಗೆ 333ರ ಕೊಠಡಿ ಫಿಕ್ಸ್​

ಬೆಂಗಳೂರು: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಕುಮಾರಸ್ವಾಮಿಯವರು ಮಾಧ್ಯಮದವರ ಮೇಲೆ ಹರಿಹಾಯುತ್ತಾ ಬಂದಿದ್ದರು. ಅಲ್ಲದೇ ವಿಧಾನ ಸೌಧಕ್ಕೆ ಮಾಧ್ಯಮದವರಿಗೆ ನಿಷೇಧ ಹೇರುವ ಸಲುವಾಗಿ, ಸಚಿವರು, ಶಾಸಕರು, ಅಧಿಕಾರಿಗಳು ಮಾಧ್ಯಮದ ಸಂಪರ್ಕಕ್ಕೆ ಸಿಗದಂತೆ ಮಾಡಲು ತೀರ್ಮಾನಿಸಿದ್ದು, ವಿಧಾನಸೌಧದ ನೆಲಮಹಡಿಗೆ ಮಾತ್ರ ಪತ್ರಕರ್ತರ ಸ್ಥಳ ನಿಗದಿ ಮಾಡಿದ್ದರು.

ಮಾಧ್ಯಮದವರಿಗೆ ನೆಲಮಹಡಿಯಲ್ಲಿನ ಕೊಠಡಿ ಸಂಖ್ಯೆ 9 ನಿಗದಿಪಡಿಸಿ, DPAR ​ನಿಂದ ಅಧಿಕೃತ ಆದೇಶ ಹೊರಡಿಸಿದ್ದರು. ಈ ಮೂಲಕ ಮಾಧ್ಯಮದವರಿಗೆ ಮುಜುಗರ ಸೃಷ್ಟಿಸುವ ಕೆಲಸಕ್ಕೆ ಮುಂದಾಗಿದ್ದರು.

ಆದರೆ ಈಗ ಮುಖ್ಯಮಂತ್ರಿಗಳು ಈಗ ಯೂ ಟರ್ನ್​ ಹೊಡೆದಿದ್ದಾರೆ. ತಾವು ನೀಡಿದ್ದ ಆದೇಶವನ್ನು ಹಿಂಪಡೆದಿದ್ದಾರೆ. ಪತ್ರಕರ್ತರಿಗೆ ನಿಗದಿಯಾಗಿದ್ದ ಕೊಠಡಿ ಸಂಖ್ಯೆ 333 ರನ್ನೇ ಮುಂದುವರಿಸುವಂತೆ ಸೂಚನೆ ನೀಡಿದ್ದಾರೆ. ಈ ಕುರಿತು ಮುಖ್ಯ ಕಾರ್ಯದರ್ಶಿಗೆ ಸಿಎಂ ಸೂಚನೆ ನೀಡಿದ್ದಾರೆ.

ಇದಕ್ಕೂ ಮೊದಲು ಮಾತನಾಡಿದ್ದ ಡಿ.ಕೆ. ಶಿವಕುಮಾರ್​, ಮಾಧ್ಯಮಗಳಿಗೆ ಯಾವ ಕೊಠಡಿ ನಿಗದಿಯಾಗಿದೆ ಅನ್ನೋದು ಗೊತ್ತಿಲ್ಲ. ವಿಧಾನಸೌಧದ ನನ್ನ ಕಚೇರಿಯನ್ನೇ ಮಾದ್ಯಮದವರಿಗೆ ಬಿಟ್ಟುಕೊಡಲು ನಾನು ರೆಡಿ ಇದ್ದೇನೆ, ಈ ಮಾತನ್ನು ಸಿಎಂಗೆ ಕೂಡಾ ಹೇಳ್ತೇನೆ ಅಂತಾ ಹೇಳಿದ್ದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv