ನೀರು ಕುಡಿಯಲು ಬಂದಿದ್ದ ಚಿರತೆ ಬಾವಿಗೆ ಬಿದ್ದು ಸಾವು..!

ಉತ್ತರ ಕನ್ನಡ : ಚಿರತೆಯೊಂದು ಎರಡು ದಿನಗಳ ಹಿಂದೆ ನೀರು ಕುಡಿಯಲು ಬಂದು ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ಅಂಕೋಲಾ ತಾಲೂಕಿನ ಆನಲೆ ಗ್ರಾಮದಲ್ಲಿ ನಡೆದಿದೆ. ಅರುಣ್ ಗುನಗಾ ಎನ್ನುವವರ ತೋಟದ ಬಾವಿಯಲ್ಲಿ ಚಿರತೆ ಬಿದ್ದಿದ್ದು, ಇದನ್ನು ಯಾರು ಗಮನಿಸಿರಲಿಲ್ಲ. ಇಂದು ಬಾವಿಯಲ್ಲಿ ಚಿರತೆ ತೇಲುತ್ತಿರುವುದು ಕಂಡು ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಹಿರೇಗುತ್ತಿ ಅರಣ್ಯ ವಲಯ ಆರ್​ಎಫ್​ಓ ಮೋಹನ್ ಬಿದರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರು ವರ್ಷದ ಗಂಡು ಚಿರತೆ ಎಂದು ತಿಳಿದುಬಂದಿದೆ. ನಂತರ ಮರಣೋತ್ತರ ಪರೀಕ್ಷೆ ನಡೆಸಿ ಚಿರತೆಯ ಅಂತ್ಯಕ್ರೀಯೆಯನ್ನು ನಡೆಸಲಾಯಿತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv