ದೊಡ್ಡಣ್ಣನ ಅಳಿಯನ ಮನೆಯಲ್ಲಿ ಅಕ್ರಮ ನೋಟು ಪತ್ತೆ ಪ್ರಕರಣ: ತನಿಖೆ ಕೈಬಿಟ್ಟ ಸಿಬಿಐ

ಚಿತ್ರದುರ್ಗ: ಚಳ್ಳಕೆರೆ ಮೂಲದ ವರ್ತಕ ಕೆ.ಸಿ. ವೀರೇಂದ್ರ ವಿರುದ್ಧದ ಅಕ್ರಮ ನೋಟು ಸಂಗ್ರಹ ಪ್ರಕರಣವನ್ನು ಸಾಕ್ಷ್ಯಾಧಾರ ಕೊರತೆಯಿಂದಾಗಿ ಸಿಬಿಐ ಅಧಿಕಾರಿಗಳು ಕೈಬಿಟ್ಟಿದ್ದಾರೆ. ಈ ಪ್ರಕರಣದ ತನಿಖೆ ನಡೆಸಿದ್ದ, ಸಿಬಿಐ ಅಧಿಕಾರಿ ಎ.ಅನ್ಬಳಗನ್​​​ ಸಾಕ್ಷ್ಯಾಧಾರ ಕೊರತೆಯಿಂದ ಪ್ರಕರಣವನ್ನು ಮುಕ್ತಾಯಗೊಳಿಸ್ತಿರೋದಾಗಿ ವಿಶೇಷ ನ್ಯಾಯಾಲಯಕ್ಕೆ ಬಿ ರಿಪೋರ್ಟ್​ ಸಲ್ಲಿಸಿದ್ದರು. ಅದನ್ನು ಪರಿಗಣಿಸಿದ ಸಿಬಿಐ ವಿಶೇಷ ನ್ಯಾಯಾಲಯ ಪ್ರಕರಣವನ್ನು ಇತ್ಯರ್ಥಗೊಳಿಸಿದೆ. ಈ ವೇಳೆ ನ್ಯಾಯಾಧೀಶ ಸದಾಶಿವ ಎಸ್​​.ಸುಲ್ತಾನ್​ಪುರಿ ವೀರೇಂದ್ರ ವಶಪಡಿಸಿಕೊಂಡಿದ್ದ ದಾಖಲೆಗಳನ್ನು ಹಿಂತಿರುಗಿಸುವಂತೆ ಸಿಬಿಐ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ಏನಿದು ಪ್ರಕರಣ?

2014ರ ಡಿಸೆಂಬರ್​ ತಿಂಗಳಲ್ಲಿ ಚಳ್ಳಕೆರೆ ಮೂಲದ ವರ್ತಕ ಕೆ.ಸಿ. ವೀರೇಂದ್ರರ ಹುಬ್ಬಳ್ಳಿ ಕಚೇರಿ, ಚಳ್ಳಕೆರಿಯ ನಿವಾಸ, ಗೋವಾದ ಕ್ಯಾಸಿನೋ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಆ ವೇಳೆ ಅವರ ಚಳ್ಳಕೆರೆಯ ನಿವಾಸದ ಬಚ್ಚಲು ಮನೆಯ ಗೊಡೆಯಲ್ಲಿ ಸಂಗ್ರಹಿಸಿದ್ದ ₹200, ₹2000 ಸಾವಿರ ಮುಖಬೆಲೆಯ ₹90 ಲಕ್ಷ ನಗದು, 4 ಕೆ.ಜಿ ಚಿನ್ನ ಸೇರಿ ಒಟ್ಟು 5.76 ಕೋಟಿ ವಶಪಡಿಸಿಕೊಂಡಿದ್ದರು. ವೀರೇಂದ್ರ ಅವರನ್ನು ಬಂಧಿಸಿ, ನಂತರ 42 ದಿನಗಳ  ಬಳಿಕ ಬಿಡುಗಡೆ ಮಾಡಲಾಗಿತ್ತು.

ದೊಡ್ಡಣ್ಣನ ಅಳಿಯನ ಮನೆಯಲ್ಲಿ ಅಕ್ರಮ ನೋಟು ಪತ್ತೆ ಪ್ರಕರಣ: ತನಿಖೆ ಕೈಬಿಟ್ಟ ಸಿಬಿಐ

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv