ಅಟವಾಡಲು ಹೋದ ಬಾಲಕ ಎಲ್ಲಿಗೆ ಹೋದ..?

ಹಾವೇರಿ: ಆಟವಾಡಲು ಎಂದು ಮನೆಯಿಂದ ಹೊರ ಹೋಗಿದ್ದ ಬಾಲಕ ನಾಪತ್ತೆಯಾಗಿರುವ ಘಟನೆ ಹಾವೇರಿ ತಾಲೂಕಿನ ಕೊಳೂರ ಗ್ರಾಮದಲ್ಲಿ ನಡೆದಿದೆ. ರತ್ನವ್ವ ಮತ್ತು ರಮೇಶ್​ ಎಂಬುವವರ ಹನ್ನೆರಡು ವರ್ಷದ ಮಗ ಶರಣಪ್ಪ ಜೂನ್​​ 3 ರಂದು ಕಾಣೆಯಾಗಿದ್ದಾನೆ. 3ನೇ ತಾರೀಖಿನಂದು ಸಂಜೆ ಅಜ್ಜಿಮನೆಗೆ ಹಾಲು ಕೊಟ್ಟು ಬರಲು ಹೋಗಿದ್ದ ಶರಣಪ್ಪ ನಂತರ ಆಟವಾಡಲು ಹೋಗಿದ್ದನಂತೆ. ಆದರೆ, ಬಳಿಕ ಕಾಣೆಯಾಗಿದ್ದಾನೆ. ಇನ್ನೂ ಬಾಲಕ ಕಾಣೆಯಾಗಿ ಎರಡು ದಿನ ಕಳೆದರು ಕೂಡ ಯಾವುದೇ ಸುಳಿವು ಸಿಗದ ಹಿನ್ನೆಲೆ ಬಾಲಕ ಶರಣಪ್ಪ ಮನೆಯಲ್ಲಿ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಈ ಸಂಬಂಧ ಹಾವೇರಿ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.