ಆಸ್ಟ್ರೇಲಿಯಾದಲ್ಲಿ ಅಮೆರಿಕಾ ಮಾದರಿಯ ವಿಮಾನ ದಾಳಿ..?

ಬ್ರಿಸ್ಬೇನ್​: ಬಹು ಅಂತಸ್ತಿನ ಕಟ್ಟಡಗಳಿಂದ ತುಂಬಿರುವ ಬ್ರಿಸ್ಬೇನ್​ ನಗರದಲ್ಲಿ ವಿಮಾನವೊಂದು ಕೆಳಹಂತದಲ್ಲಿ ಹಾರಾಟ ನಡೆಸಿ, ಜನರನ್ನು ಭಯಭೀತರನ್ನಾಗಿಸಿದೆ. ಯಾವ ಪರಿ ಅಂದ್ರೆ ಅಮೆರಿಕದಲ್ಲಿ ಲಾಡೆನ್​ ನಡೆಸಿದ 9/11 ಮಾದರಿಯ ದಾಳಿ ಏನಾದ್ರೂ ಘಟಿಸುತ್ತಾ ಇದ್ಯಾ ಅಂತಾ ಜೀವ ಕೈಯಲ್ಲಿ ಹಿಡಿದು ರಸ್ತೆಗೆ ಬಂದಿದ್ದಾರೆ.

 ಆದ್ರೆ ಆಗಿದ್ದೇನೆಂದರೆ ರಾಯಲ್​ ಆಸ್ಟ್ರೇಲಿಯನ್​ ಏರ್​ಫೋರ್ಸ್​​ ಆಯೋಜಿಸಿದ್ದ ಏರ್​​ ಷೋದಲ್ಲಿ ಬೋಯಿಂಗ್​​ ವಿಮಾನವೊಂದು ಜನವಸತಿ ಇರುವ ಕಡೆ ಕೆಳಹಂತದಲ್ಲಿ ಹಾರಾಟ ನಡೆಸಿ, ಭಾರಿ ಛೀಮಾರಿಗೆ ಗುರಿಯಾಗಿದೆ. ಇದೊಂದು ಅಪಾಯಕಾರಿ ಮತ್ತು ಸ್ಟುಪಿಡ್ ಸ್ಟಂಟ್​ ಎಂದು ಜನ ಜರಿದಿದ್ದಾರೆ.

ಏರ್​​ ಷೋ ಹೆಸರಿನಲ್ಲಿ ಭಯಾನಕ ಶಬ್ದದೊಂದಿಗೆ ಬಹುಅಂತಸ್ತಿನ ಕಟ್ಟಡಗಳ ಮಧ್ಯೆ ಹಾರುತ್ತಾ ಬಂದು, ವೈಮಾನಿಕ ಸ್ಟಂಟ್​ ನಡೆಸಿರುವುದು ಕೆಲಸ ಕಚೇರಿಗಳಲ್ಲಿ ತೊಡಗಿದ್ದವರಿಗೂ ಆಘಾತವನ್ನುಂಟುಮಾಡಿದೆ. ಕೆಲ ಉದ್ಯೋಗಿಗಳು 9/11 ದಾಳಿ ನಡೆದಿದೆ ಎಂದು ಬೊಬ್ಬಿಟ್ಟಿದ್ದೂ ಕೇಳಿಬಂದಿದೆ. ಈ ಹಂತದಲ್ಲಿ ಒಂದೇ ಒಂದು ಚಿಕ್ಕ ಯಡವಟ್ಟು ನಡೆದಿದ್ದರೂ ಗತಿಯೇನು ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv