‘ಮಂತ್ರಕ್ಕೆ ಮಾವಿನ ಕಾಯಿ ಉದುರೋದಿಲ್ಲ’

ಚಿಕ್ಕಮಗಳೂರು: ಹೆಚ್​​​.ಡಿ.ಕುಮಾರಸ್ವಾಮಿ ಸಿಎಂ ಆದಾಗಿನಿಂದ ಸರ್ಕಾರ ಆಗ ಬೀಳುತ್ತೆ ಈಗ ಬೀಳುತ್ತೆ ಎಂಬ ಹೇಳಿಕೆ ನೀಡುತ್ತಾ ಬಿಜೆಪಿಯವರು ಹಗಲು ಕನಸು ಕಾಣುತ್ತಿದ್ದಾರೆ ಎಂದು ವಿಧಾನ ಪರಿಷತ್​​ ಸದಸ್ಯ ಎಸ್​​.ಎಲ್​.ಭೋಜೇಗೌಡ ಕಿಡಿಕಾರಿದ್ದಾರೆ. ಸಂಕ್ರಾತಿ, ಶಿವರಾತ್ರಿಗೆ ಬೀಳುತ್ತೆ ಅಂತಾ ಬಿಜೆಪಿಯವರು ಹೇಳ್ತಾನೆ ಬಂದಿದ್ದಾರೆ. ಪ್ರತಿ ಹಬ್ಬದಲ್ಲಿಯೂ ಈ ಸಮಿಶ್ರ ಸರ್ಕಾರ ಬೀಳುತ್ತದೆ ಎಂದು ಹೇಳುತ್ತಿದ್ರು. ಬಿಜೆಪಿಯವರು, ಸರ್ಕಾರವನ್ನು ದಾಳ ಹಾಕಿ ಉರುಳಿಸುತ್ತೇವೆ. ನಮ್ಮ ಬಳಿ 12 ಶಾಸಕರಿದ್ದಾರೆೆ, 14 ಜನರಿದ್ದಾರೆ ಎಂದು ಹೇಳ್ತಾರೆ. ಉಮೇಶ ಕತ್ತಿ ಅವರು 24 ಗಂಟೆಯಲ್ಲಿ ಸರ್ಕಾರ ಬೀಳುತ್ತೆ ಅಂತಾ ಹೇಳಿದ್ರು. ಅವರು ಹಿರಿಯರು ಮಾತಿನಲ್ಲಿ ತೂಕವಿಟ್ಟು ಮಾತನಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ರಚನೆಯಾಗಿದೆ. ಇದನ್ನ ಜನರಿಂದ ಮಾತ್ರ ಬೀಳಿಸಲು ಸಾಧ್ಯ. ಹಾದಿ ಬೀದಿಯಲ್ಲಿ ಹೋಗೋರು ಹೇಳಿದ್ರೆ ಸರ್ಕಾರ ಬೀಳಲ್ಲ. ಮಂತ್ರಕ್ಕೆ ಮಾವಿನ ಕಾಯಿ ಉದ್ರೋದಿಲ್ಲ ಅಂತ ಆಕ್ರೋಶ ಹೊರ ಹಾಕಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv