ಸಾಲ ಮರುಪಾವತಿ ಮಾಡಿದ್ದರೂ ಬ್ಯಾಂಕ್​​ನಿಂದ ರೈತನಿಗೆ ನೋಟಿಸ್..!

ಬೆಳಗಾವಿ: ಸಾಲ ಮರುಪಾವತಿ ಮಾಡಿದ್ದರೂ ರೈತನಿಗೆ ಹೆಚ್​​ಡಿಎಫ್​ಸಿ ಬ್ಯಾಂಕ್​ ನೋಟಿಸ್ ನೀಡಿ ಶಾಕ್ ಕೊಟ್ಟಿದೆ. ಜಿಲ್ಲೆಯ ಗೋಕಾಕ್ ತಾಲೂಕಿನ ಕಳ್ಳಿಗುದ್ದಿ ಗ್ರಾಮದ ರೈತ ಅಪ್ಪಣ್ಣಾ ಸಂಕ್ರಿ ಎಂಬುವವರಿಗೆ ಬೆಳಗಾವಿಯ ಎಚ್​ಡಿಎಫ್​ಸಿ ಬ್ಯಾಂಕ್ ಸಾಲ ಮರುಪಾವತಿ ಮಾಡದಿದ್ದರೆ ನಿಮ್ಮ ಜಮೀನು ಹರಾಜು ಹಾಕುತ್ತೇವೆ ಎಂದು ನೋಟಿಸ್ ಜಾರಿ ಮಾಡಿದೆ.

ಅಪ್ಪಣ್ಣಾ 2012ರಲ್ಲಿ ಎಚ್​ಡಿಎಫ್​ಸಿ ಬ್ಯಾಂಕ್​ನಿಂದ ಸಾಲ ಪಡೆದಿದ್ದರು. 2014ರವರೆಗೆ ಸಾಲದ ಬಡ್ಡಿಯನ್ನು ಕಟ್ಟಿದ್ರು. ಆದರೆ ಬ್ಯಾಂಕ್ ಮತ್ತೆ 2016ರಲ್ಲಿ ₹ 9 ಲಕ್ಷ ಹಣವನ್ನು ಕಟ್ಟುವಂತೆ ಅಪ್ಪಣ್ಣಗೆ ನೋಟಿಸ್ ನೀಡಿದೆ. ಅಪ್ಪಣ್ಣಾ ₹ 6 ಲಕ್ಷ ಹಣವನ್ನ ಬ್ಯಾಂಕ್​ಗೆ ಪಾವತಿ ಮಾಡಿದ್ದರು. ಬಾಕಿ ಉಳಿದ ₹ 3 ಲಕ್ಷ ಹಣಕ್ಕೆ ಅಪ್ಪಣ್ಣ ಚೆಕ್ ನಿಡಿದರು. ಅದು  ಬೌನ್ಸ್ ಆಗಿತ್ತು, ಆದ್ದರಿಂದ ಅಪ್ಪಣ್ಣ ಜೈಲಿಗೆ ಹೋಗಿದ್ದರು. ಜೈಲಿನಿಂದ ಬಂದ ಮೇಲೆ ಬಾಕಿ ₹ 3 ಲಕ್ಷ ಹಣವನ್ನು ಎರಡು ಕಂತಿನಲ್ಲಿ ಕಟ್ಟಿದ್ದರು. ಎಲ್ಲಾ ಸಾಲ ಕಟ್ಟಿದ ಬಳಿಕವೂ  ಬ್ಯಾಂಕ್​ ಜಮೀನು ಹರಾಜು ಹಾಕುವುದಾಗಿ ನೋಟಿಸ್ ನೀಡಿದೆ.

ಹೀಗಾಗಿ ಅಪ್ಪಣ್ಣ ರೈತ ಸಂಘದ ಜೊತೆಗೆ ಸೇರಿ ಬ್ಯಾಂಕ್ ಸಿಬ್ಬಂದ್ದಿಯನ್ನು ಬ್ಯಾಂಕ್​ನಲ್ಲಿ ಕೂಡಿಹಾಕಿ, ಬ್ಯಾಂಕ್​ಗೆ ಬೀಗ ಹಾಕಿ, ಬ್ಯಾಂಕ್ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ. ಬ್ಯಾಂಕ್​ ಮ್ಯಾನೆಜರ್ ರೈತರ ಪ್ರತಿಭಟನೆಗೆ ಹೆದರಿ ಶಾಖೆಯಿಂದ ಕಾಲ್ಕಿತ್ತಿದ್ದಾನೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv