ಮಾಜಿ ಸಚಿವ ರುದ್ರಪ್ಪ ಲಮಾಣಿ ಕಾರಿನಲ್ಲಿದ್ದ ಹಣದ ಬ್ಯಾಗ್​​ ಕಳ್ಳತನ

ಹುಬ್ಬಳ್ಳಿ: ಕಳ್ಳನೊಬ್ಬ ಮಾಜಿ ಸಚಿವ ರುದ್ರಪ್ಪ ಲಮಾಣಿಯವರ ಕಾರಿನಲ್ಲಿದ ಹಣದ ಬ್ಯಾಗ್ ಎಗರಿಸಿ ಪರಾರಿಯಾಗಿದ್ದಾನೆ. ಚಾಲಾಕಿ ಕಳ್ಳನ ಕರಾಮತ್ತು ಸಿಸಿಟಿಯಲ್ಲಿ ಸೆರೆಯಾಗಿದೆ. ಮೂರು ದಿನಗಳ ಹಿಂದೆ ಹುಬ್ಬಳ್ಳಿಯ ಗೋಕುಲ್ ರಸ್ತೆಯ ಅರ್ಬನ್ ಓಯೆಸಿಸ್ ಮಾಲ್ ಬಳಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಅರ್ಬನ್ ಓಯಾಸಿಸ್ ಮಾಲ್‌ನಲ್ಲಿ ಹಬ್ಬದ ಬಟ್ಟೆ ಖರೀದಿಗೆ ಬಂದಿದ್ದ ಲಮಾಣಿ ಅವರ ಕಾರ್‌ನಲ್ಲಿ ನಲವತೈದು ಸಾವಿರ ರೂಪಾಯಿ ಹಣದ ಬ್ಯಾಗ್ ಇತ್ತು. ಆದ್ರೆ ಗಾಡಿ ಲಾಕ್ ಮಾಡದೇ ಬಟ್ಟೆ ಖರೀದಿಗೆ ಹೋಗಿದ್ದರು. ಇದನ್ನು ಗಮನಿಸಿದ ಕಳ್ಳ ಸಮಯ ನೋಡಿಕೊಂಡು ಬ್ಯಾಗ್​​ ಎಗರಿಸಿದ್ದಾನೆ. ಸದ್ಯ ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಸಂಬಂಧ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv