ಕಟ್ಟಡ ದುರಂತ: ರಕ್ಷಣಾ ಕಾರ್ಯದಲ್ಲಿ ನಿರತವರಿಗೆ ಅನ್ನಪೂರ್ಣೆಯಾದ ಪುಟ್ಟ ಬಾಲಕಿ..!

ಧಾರವಾಡ: ದಾರವಾಡದಲ್ಲಿ ಕಟ್ಟಡ ದುರಂತ ಸಂಭವಿಸಿ ಇಂದಿಗೆ 6 ದಿನ ಕಳೆದಿದೆ. ಆದ್ರೆ, ಇವತ್ತಿಗೂ ಕೂಡ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಕಟ್ಟಡದೊಳಗೆ ಸಿಲುಕಿರುವ ಜನರನ್ನು ರಕ್ಷಿಸಲು ಪೋಲೀಸರು ಹರ ಸಾಹಸ ಪಡುತ್ತಿದ್ದಾರೆ. ಇದೇ ಹಿನ್ನಲೆಯಲ್ಲಿ ಪೊಲೀಸರಿಗೆ ಸಾಕಷ್ಟು ಜನ ತಿಂಡಿ ತಿನಿಸು ಹಾಗೂ ತಂಪು ಪಾನೀಯಗಳನ್ನು ತಂದು ಕೊಟ್ಟು ಸಹಾಯ ಮಾಡುತ್ತಿದ್ದಾರೆ. ಇದೀಗ ಧಾರವಾಡದ ಅರುಣ ಎಂಬ ಪುಟ್ಟ ಭಾಲಕಿಯೊಬ್ಬಳು ಪೋಲೀಸರಿಗೆ ಸಹಾಯ ಮಾಡಿ ಸುದ್ದಿಯಾಗಿದ್ದಾಳೆ. ಕಳೆದ ಮೂರು ದಿನಗಳಿಮದ ಬಾಲಕಿ ಪೊಲೀಸರಿಗೆ ಬಾಳೆಹಣ್ಣು, ತಂಪು ಪಾನೀಯ ಹಾಗೂ ಆಹಾರವನ್ನು ಕೊಟ್ಟು ಸಹಕರಿಸಿದ್ದಾಳೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv