ಎಣ್ಣೆ ಹಚ್ಕೊಂಡು ಕಳ್ತನ ಮಾಡ್ತಿದ್ದವನ ಬಂಧನ..!

ಧಾರವಾಡ: ಮೈಗೆ ಎಣ್ಣೆ ಹಚ್ಚಿಕೊಂಡು ಮೈ ಮೇಲೆ ಕಡಿಮೆ ಬಟ್ಟೆ ಹಾಕಿ ಕಳ್ಳತನ ಮಾಡುತಿದ್ದ ಅಂತರ್ ರಾಜ್ಯ ಕಳ್ಳನನ್ನು ಹುಬ್ಬಳ್ಳಿ – ಧಾರವಾಡ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪೊಲೀಸ್ ಆಯುಕ್ತ ಎಮ್.ಎನ್. ನಾಗರಾಜ್, ಅಂತರ್ ರಾಜ್ಯ ಕಳ್ಳನನ್ನು ಬಂಧನ ಮಾಡಿದ ಗಿರೀಶ ಬೋಜನ್ನವರ ನೇತೃತ್ವದ ತಂಡಕ್ಕೆ 10,000 ರೂಪಾಯಿ ಬಹುಮಾನ ಘೋಷಣೆ ಮಾಡಿದ್ದಾರೆ.
ಮಹಾರಾಷ್ಟ್ರದ ಸೊಲ್ಲಾಪೂರ ಮೂಲದ ಸುರೇಶ ಶಿವಪುರಿಯೇ ಬಂಧಿತ ಆರೋಪಿ. ಅಂತರಾಜ್ಯ ಕಳ್ಳನಾಗಿರುವ ಇವನು ಮಹಾರಾಷ್ಟ್ರ ಪೊಲೀಸ​ರಿಗೂ ಬೇಕಾಗಿದ್ದ ಎನ್ನಲಾಗಿದೆ. ಧಾರವಾಡ 5 ಹಾಗೂ ಗದಗನಲ್ಲಿ 3 ಮನೆ ಕಳ್ಳತನ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕಳ್ಳನಿಂದ 327 ಗ್ರಾಂ ಚಿನ್ನ ಹಾಗೂ ಒಂದು ಬೈಕ್ ಸೇರಿ 10.75 ಲಕ್ಷ ರೂಪಾಯಿಗಳನ್ನು ವಶಕ್ಕೆ ಪಡೆಯಲಾಗಿದೆ. ಕಳ್ಳನನ್ನ ಹಿಡಿಯಲು ಪೊಲೀಸ್ ಆಯುಕ್ತರಿಂದ ತಂಡ ರಚನೆ ಮಾಡಲಾಗಿತ್ತು. ಮಹಾರಾಷ್ಟ್ರ ಪೊಲೀಸರಿಂದ ಕೂಡಾ ತಪ್ಪಿಸಿಕೊಂಡು ಈತ ಓಡಾಡುತಿದ್ದ. ಮಹಾರಾಷ್ಟ್ರ ಹಾಗೂ ರಾಜ್ಯದ ವಿವಿಧೆಡೆ 41 ಪ್ರಕರಣಗಳಲ್ಲಿ ಬೇಕಾಗಿದ್ದ, ಮಹಾರಾಷ್ಟ್ರ ಪೊಲೀಸರು ಈತನನ್ನು ಗಡಿ ಪಾರು ಮಾಡಿ ಆದೇಶ ಹೊರಡಿಸಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv