ಮಕ್ಕಳ ಕಳ್ಳನೆಂದು ಅಮಾಯಕನಿಗೆ ಥಳಿಸಿದ್ದ ಆರೋಪಿಗಳ ಬಂಧನ..!

ಕಲಬುರ್ಗಿ: ಮಕ್ಕಳ ಕಳ್ಳನೆಂದು ಶಂಕಿಸಿ ಓರ್ವ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಮೇ 19 ರಂದು ಸೇಡಂ ತಾಲೂಕಿನ ಕೋಡ್ಲಾ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಸಿಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಅವತಾರ್ ಸಿಂಗ್, ತನ್ನ ಬಳಿ ಕೃಪಾಣ ಅಂದರೆ ಸಿಖ್​ ಧರ್ಮೀಯರು ಬಳಸುವ ಧಾರ್ಮಿಕ ಆಯುಧ ಇಟ್ಟುಕೊಂಡಿದ್ದರಿಂದ ಅನುಮಾನಗೊಂಡು ಮಕ್ಕಳ ಕಳ್ಳನೆಂದು ಶಂಕಿಸಿ ಗಂಭೀರ ಹಲ್ಲೆ ಮಾಡಲಾಗಿತ್ತು. ಕೋಡ್ಲಾ ಗ್ರಾಮದ ಆರೋಪಿಗಳಾದ ನಾಗೇಂದ್ರಪ್ಪ, ಭೀಮೇಶ್, ಸಾಯಿಬು ಗೌನಳ್ಳಿ, ಸಾಯಿಬು ಅಲ್ಲೂರು, ಲಕ್ಷ್ಮಣ ಮತ್ತು ಭೀಮೇಶಪ್ಪ ಸೇರಿ ಅವತಾರ್​ ಸಿಂಗ್​ಗೆ ತೀವ್ರವಾಗಿ ಥಳಿಸಿದ್ದರು.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv