ಕೊಲ್ಕತ್ತಾ ನೈಟ್​ರೈಡರ್ಸ್​ ತಂಡದ ಈ ಬಾಹುಬಲಿಗೆ ಸರಿಸಾಟಿ ಯಾರು..?

ಆಂಡ್ರೆ ರಸೆಲ್, ಕೊಲ್ಕತ್ತಾ ನೈಟ್​ರೈಡರ್ಸ್​ ತಂಡದ ಬಿಗ್ ಮ್ಯಾಚ್​ವಿನ್ನರ್.  ಕೆಕೆಆರ್ ಇವತ್ತು ಪಾಯಿಂಟ್ ಟೇಬಲ್​ನಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡಿದೆ ಅಂದ್ರೆ, ಅದಕ್ಕೆ ರಸೆಲ್ ಪ್ರಮುಖ ಕಾರಣ. ಸೋಲೋ ಮ್ಯಾಚ್​ಗಳಲ್ಲೂ ಏಕಾಂಗಿಯಾಗಿ ಹೋರಾಟ ನಡೆಸಿ ಗೆಲ್ಲಿಸಿಕೊಡೋ ತಾಕತ್ತು, ಈ ಕೆರಿಬಿಯನ್ ಆಟಗಾರನಿಗಿದೆ. ರಸೆಲ್​ರ ಈ ಸೂಪರ್​ ಟ್ಯಾಲೆಂಟ್​ ನೋಡೇ, ಅಭಿಮಾನಿಗಳು ಈತನನ್ನ ಬಾಹುಬಲಿಗೆ ಹೋಲಿಕೆ ಮಾಡುತ್ತಿರೋದು. ಟೂರ್ನಿಯಲ್ಲಿ ಆಂಡ್ರೆ ರಸೆಲ್ ಆಡಿರೋದು 6 ಪಂದ್ಯಗಳು. ಅದ್ರಲ್ಲಿ 121 ಎಸೆತಗಳನ್ನ ಎದುರಿಸಿರೋ ರಸೆಲ್​ಗಳಿಸಿರೋದು, ಬರೋಬ್ಬರಿ 257 ರನ್​. 2 ಅರ್ಧಶತಕಗಳನ್ನ ಬಾರಿಸಿರೋ ರಸೆಲ್ 25 ಸಿಕ್ಸರ್​ಗಳನ್ನ ಸಿಡಿಸಿ, ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಬ್ಯಾಟಿಂಗ್​ನಲ್ಲಿ 3 ಬಾರಿ ನಾಟೌಟ್ ಆಗಿ ಉಳಿದುಕೊಂಡಿರೋ ರಸೆಲ್, ಟೂರ್ನಿಯಲ್ಲಿ 212.39 ಬೆಸ್ಟ್ ಸ್ಟ್ರೈಕ್​ರೇಟ್ ಹೊಂದಿದ್ದಾರೆ. ಈಗಾಗಲೇ ಟೂರ್ನಿಯಲ್ಲಿ ಅಬ್ಬರಿಸುತ್ತಿರೋ ರಸೆಲ್ ಪವರ್​ಗೆ, ಎದುರಾಳಿಗಳು ಫುಲ್ ಸೈಲೆಂಟ್ ಆಗಿಬಿಟ್ಟಿದ್ದಾರೆ.

 


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv