ಐವರು ಐಪಿಎಸ್​ ಅಧಿಕಾರಿಗಳ ವರ್ಗಾವಣೆ ಭಾಗ್ಯ ನೀಡಿದ ಮೈತ್ರಿ ಸರ್ಕಾರ

ಬೆಂಗಳೂರು: ನಿನ್ನೆ ರಾಜ್ಯ ಸರ್ಕಾರ ಐಪಿಎಸ್​ ಶ್ರೇಣಿಯ ಐವರು ಹಿರಿಯ ಪೊಲೀಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಬೆಳಗಾವಿಯ ನಗರದ ಐಜಿಪಿ ಮತ್ತು ಆಯುಕ್ತ ಎಮ್​. ಚಂದ್ರಶೇಖರ್​ರವರನ್ನು ಭ್ರಷ್ಟಾಚಾರ ನಿಗ್ರಹ ದಳದ ಐಜಿಪಿಯಾಗಿ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ.

ಮಂಗಳೂರು ನಗರ ಐಜಿಪಿ ಮತ್ತು ಆಯುಕ್ತರಾದ ವಿಫುಲ್​ ಕುಮಾರ್​ ರವರನ್ನು ಮೈಸೂರಿನಲ್ಲಿರುವ ಕರ್ನಾಟಕ ಪೊಲೀಸ್​ ಅಕಾಡೆಮಿಯ ಐಡಿಜಿಪಿ ಮತ್ತು ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ನಗರದ ರೈಲ್ವೆ ಡಿಐಜಿಪಿ ಆಗಿರುವ ಡಿ.ಸಿ. ರಾಜಪ್ಪ ರವರನ್ನು ಬೆಳಗಾವಿ ನಗರದ ಆಯುಕ್ತರ ಸ್ಥಾನಕ್ಕೆ ವರ್ಗಾಯಿಸಲಾಗಿದೆ. ಬಾಗಲಕೋಟೆ ಜಿಲ್ಲಾ ವರಿಷ್ಠಾಧಿಕಾರಿಯಾಗಿರುವ ಸಿ.ವಂಶಿ ಕೃಷ್ಣರವರನ್ನು ಪೂರ್ವವಿಭಾಗದ ಭ್ರಷ್ಟಾಚಾರ ನಿಗ್ರಹ ದಳ ದಾವಣಗೆರೆ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ಅಪರಾಧ ನಿಗ್ರಹ ದಳ ಎಸ್​ಪಿ ಸಿ.ಬಿ. ರಿಶ್ಯಂತ್​ರವರನ್ನು ಬಾಗಲಕೋಟೆ ಎಸ್ಪಿಯಾಗಿದ್ದ ಸಿ. ವಂಶಿ ಕೃಷ್ಣರವರ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv