ಕಾರ್ಪೊರೇಟರ್‌ ಮೇಲೆ ಪತಿಯಿಂದಲೇ ಮಾರಣಾಂತಿಕ ಹಲ್ಲೆ..!

ಬೆಂಗಳೂರು: ಥಣಿಸಂಧ್ರ ವಾರ್ಡ್ ಕಾರ್ಪೊರೇಟರ್ ಮಮತಾ ಮೇಲೆ ಪತಿಯೇ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡ ಮಮತಾರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪತಿ ವೆಂಕಟೇಶ್ ಅಲಿಯಾಸ್ ಪಳನಿಯೇ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.

ಜುಲೈ 8ರಂದು ವೆಂಕಟೇಶ್ ಅಲಿಯಾಸ್​ ಪಳನಿ, ಆಟಕ್ಕೆ ಹೋಗಿದ್ದಾನೆ ಅನ್ನೋ ಕಾರಣಕ್ಕೆ ಮಗ ವೈಶಾಖ್​ನನ್ನು ಹೊಡೆಯುತ್ತಿದ್ದರು. ಮಧ್ಯೆ ಪ್ರವೇಶಿಸಿದ ಪತ್ನಿ ಮಮತಾ ಮಗನನ್ನು ಹೊಡೆಯದಂತೆ ತಡೆದಿದ್ದರು. ಈ ವೇಳೆ ಗಂಡ ಮತ್ತು ಹೆಂಡತಿ ನಡುವೆ ಮಾತಿನ ಚಕಮಕಿ ನಡೆದು ಹಲ್ಲೆ ನಡೆದಿದೆ ಎನ್ನಲಾಗ್ತಿದೆ. ಕಬ್ಬಿಣದ ರಾಡ್​ನಿಂದ ಹಲ್ಲೆ ಮಾಡಿದ್ದಲ್ಲದೇ, ಆಕೆಯ ಹೊಟ್ಟೆಗೆ ಒದ್ದಿದ್ದಾನೆ. ನಂತರ ಕೆಳಗೆ ಬಿದ್ದ ಪತ್ನಿಯನ್ನು ತನ್ನ ಎರಡೂ ಕಾಲುಗಳ ಮಧ್ಯೆ ಸಿಕ್ಕಿಕೊಂಡು ಮನ ಬಂದಂತೆ ಹಿಗ್ಗಾ-ಮುಗ್ಗಾ ಥಳಿಸಿದ್ದಾನೆ. ಈ ಸಂಬಂಧ ಪತಿ ವಿರುದ್ಧ ಕೊತ್ತುನೂರು ಪೊಲೀಸ್​ ಠಾಣೆಯಲ್ಲಿ ಕಾರ್ಪೊರೇಟರ್ ಮಮತಾ ದೂರು ದಾಖಲಿಸಿದ್ದಾರೆ. ಎಫ್​ಐಆರ್ ದಾಖಲಾಗುತ್ತಿದ್ದಂತೆ ಆರೋಪಿ ವೆಂಕಟೇಶ್ ಎಸ್ಕೇಪ್ ಆಗಿದ್ದಾನೆ.
ಕಳೆದ 3 ವರ್ಷಗಳಿಂದಲೂ‌ ಒಂದಲ್ಲ ಒಂದು ಕಾರಣಕ್ಕೆ ಮಮತಾ ಮತ್ತು ವೆಂಕಟೇಶ್ ಮಧ್ಯೆ ಗಲಾಟೆ ನಡೆಯುತ್ತಿದೆ. ಈ ಹಿಂದೆಯೂ ಹಲವು ಬಾರೀ‌ ತನ್ನನ್ನು ಥಳಿಸಿದ್ದ ಗಂಡ ವೆಂಕಟೇಶ್ ವಿರುದ್ಧ, 2017ರಲ್ಲಿ ಕಾರ್ಪೋರೇಟರ್ ಮಮತ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv