‘ಸೂಪರ್’ ಮಾರ್ಕೆಟ್​ ಐಡಿಯಾ; ಪ್ಲಾಸ್ಟಿಕ್​​ಗೆ ಬೈ ಬೈ​​.., ಬಾಳೆ ಎಲೆಯಲ್ಲಿ ಪ್ಯಾಕ್​ ಆಗ್ತಿವೆ ತರಕಾರಿ

ಪ್ಲಾಸ್ಟಿಕ್​​ ತ್ಯಾಜ್ಯದಿಂದ ಪರಿಸರದ ಮೇಲೆ ಉಂಟಾಗೋ ಪರಿಣಾಮಗಳ ಬಗ್ಗೆ ಗೊತ್ತೇ ಇದೆ. ಮಣ್ಣಿನಲ್ಲಿ ಪ್ಲಾಸ್ಟಿಕ್ ಕರಗಲು ನೂರಾರು ವರ್ಷಗಳೇ ಬೇಕು. ಹೀಗಾಗಿ ಪ್ಲಾಸ್ಟಿಕ್​​ ಬಳಕೆಗೆ ಬ್ರೇಕ್ ಹಾಕಲು ಹಲವಾರು ದೇಶಗಳು ಸಾಕಷ್ಟು ನಿಯಮಗಳನ್ನ ತಂದಿವೆ. ಆದರೂ ಇಂದಿಗೂ ತರಕಾರಿ ಅಥವಾ ಹಣ್ಣಿನ ಅಂಗಡಿಗಳಲ್ಲಿ, ದಿನಸಿ ಅಂಗಡಿಗಳಲ್ಲಿ ಪ್ಯಾಕೇಜಿಂಗ್​ಗಾಗಿ ಪ್ಲಾಸ್ಟಿಕ್​​ ಕವರ್​ಗಳನ್ನೇ ಬಳಸಲಾಗುತ್ತದೆ. ಇದಿಲ್ಲದೇ ಬೇರೆ ದಾರಿ ಇಲ್ಲ ಅನ್ನೋದು ಅಂಗಡಿಯವರ ವಾದ ಕೂಡ ಹೌದು. ಆದ್ರೆ ಪ್ಲಾಸ್ಟಿಕ್​​​ ಬದಲಾಗಿ  ಬಾಳೆಎಲೆಗಳನ್ನ ಪ್ಯಾಕೇಜಿಂಗ್​​ಗಾಗಿ ಬಳಸೋ ಮೂಲಕ ಸೂಪರ್​ ಮಾರ್ಕೆಟ್​ವೊಂದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಥೈಲ್ಯಾಂಡ್​​ನಲ್ಲಿರೋ ಚಿಯಾಂಗ್​ ಮಾಯ್​​ ಸೂಪರ್​ ಮಾರ್ಕೆಟ್​​, ಪ್ಲಾಸ್ಟಿಕ್​ ಕವರ್​​ಗಳಿಗೆ ಗುಡ್​ ಬೈ ಹೇಳಿ, ತರಕಾರಿಗಳ ಪ್ಯಾಕೇಜಿಂಗ್​​ಗೆ ಬಾಳೆ ಎಲೆಗಳನ್ನ ಬಳಸುತ್ತಿದೆ. ಸೌತೆಕಾಯಿ, ಬೀನ್ಸ್​, ಸೊಪ್ಪು, ಮೆಣಸಿನಕಾಯಿ, ಶುಂಠಿ ಹಾಗೂ ಮುಂತಾದ ಹಲವು ಬಗೆಯ ತರಕಾರಿಗಳನ್ನ ಬಾಳೆಎಲೆಯಲ್ಲೇ ಪ್ಯಾಕ್ ಮಾಡಲಾಗಿದೆ. ಇದು ವಿಶ್ವದಾದ್ಯಂತ ಜನರ ಗಮನ ಸೆಳೆದಿದ್ದು, ಪ್ರಶಂಸೆಗೆ ಪಾತ್ರವಾಗಿದೆ. ಬಾಳೆ ಎಲೆಯಲ್ಲಿ ತರಕಾರಿಗಳನ್ನ ಸುತ್ತಿಟ್ಟಿರೋ ಫೋಟೋಗಳನ್ನ ಪರ್ಫೆಕ್ಟ್​​ ಹೋಮ್ಸ್​ ಚಿಂಗ್​ ಮಾಯ್​ ಫೇಸ್​​ಬುಕ್​ ಪೇಜ್​ನಲ್ಲಿ ಹಂಚಿಕೊಳ್ಳಲಾಗಿದ್ದು, ಈಗ ವೈರಲ್ ಆಗಿದೆ. 17 ಸಾವಿರಕ್ಕೂ ಹೆಚ್ಚು ಬಾರಿ ಈ ಪೋಸ್ಟ್​​ ಶೇರ್​ ಆಗಿದೆ. ಸಾಕಷ್ಟು ಜನರು ಈ ಐಡಿಯಾ ಮೆಚ್ಚಿ ಕಮೆಂಟ್​ ಮಾಡಿದ್ದಾರೆ. ಸಣ್ಣ ಸಣ್ಣ ಹೆಜ್ಜೆಯಿಂದ ದೊಡ್ಡ ಬದಲಾವಣೆ ಸಾಧ್ಯ ಅಂತ ಕೆಲವರು ಹೇಳಿದ್ದು, ಸೂಪರ್​ ಮಾರ್ಕೆಟ್​​ನ ಈ ಐಡಿಯಾ ಸೂಪರ್​ ಎಂದಿದ್ದಾರೆ.

ಅಂದ್ಹಾಗೆ ಪ್ರತಿ ವರ್ಷ ಜಗತ್ತಿನಾದ್ಯಂತ 10 ಲಕ್ಷ ಕೋಟಿ ಸಿಂಗಲ್​​​ ಯೂಸ್​ ಪ್ಲಾಸ್ಟಿಕ್​​ ಕವರ್​ಗಳು ಬಳಕೆಯಾಗ್ತಿವೆ. ಇಂಥ ಸಿಂಗಲ್​ ಯೂಸ್​​ ಪ್ಲಾಸ್ಟಿಕ್​​​ನಿಂದ ಪರಿಸರದ ಮೇಲೆ ಪರಿಣಾಮ ಬಿರುತ್ತಿದೆ. ಪ್ಲಾಸ್ಟಿಕ್​ ಕವರ್​ಗಳು ಸಮುದ್ರವನ್ನ ಸೇರಿ, ನೀರು ಮಲಿನಗೊಳ್ಳುತ್ತಿರುವುದಲ್ಲದೇ ಜಲಚರಗಳ ಪ್ರಾಣಕ್ಕೂ ಕುತ್ತು ತರುತ್ತಿದೆ.

Well done Veggie first and Rimping. Let's hope there are more great ways to cut plastic!

Posted by Perfect Homes Chiangmai on Thursday, March 21, 2019

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv