ಅಬ್ಬಾ ಅಂತೂ ಕೋಚ್​ ಸೇರಿದಂತೆ, ಎಲ್ರೂ ಹೊರಬಂದ್ರಪ್ಪಾ..!

ಚಿಯಾಂಗ್​ ರೈ (ಥಾಯ್ಲೆಂಡ್): ಇಲ್ಲಿನ ಗುಹೆಯಲ್ಲಿ 18 ದಿನಗಳಿಂದ ವನವಾಸ ಅನುಭವಿಸಿದ್ದ ವೈಲ್ಡ್ ಬೋರ್​ ತಂಡದ ಅಷ್ಟೂ ಮಂದಿ ಹೊರಬಂದಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ. ಸುದ್ದಿಯನ್ನು ಕೇಳಿ ಇಡೀ ಜಗತ್ತೇ ನಿಟ್ಟುಸಿರುಬಿಟ್ಟಿದೆ! ಕೋಚ್​ ಎಕಾಪೊಲ್​ ಚಾಂತವಾಂಗ್ ಸೇರಿದಂತೆ ನಾಲ್ಕು ಮಂದಿಯನ್ನು ಕೊನೆಯ ಹಂತದ ಕಾರ್ಯಾಚರಂಣೆ ವೇಳೆ ರಕ್ಷಿಸಲಾಗಿದೆ ಎಂದು ಥಾಯ್​ ನೇವಿ ಸೀಲ್​ ರಕ್ಷಣಾ ತಂಡದ ಅಧಿಕಾರಿಗಳು ತಿಳಿಸಿದ್ದಾರೆ.

ತಂಡದ ಒಟ್ಟು 13 ಮಂದಿಯ ಪೈಕಿ 9 ಬಾಲಕರನ್ನು ರಕ್ಷಿಸಲಾಗಿತ್ತು. ಇಂದು ಮಂಗಳವಾರ ಸಂಜೆ ವೇಳೆಗೆ ಉಳಿದ ನಾಲ್ಕೂ ಮಂದಿಯನ್ನು ಹೊರತರಲಾಗಿದೆ ಎಂದು ರಾಯ್ಟರ್ಸ್​ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಗುಹೆವಾಸದಿಂದ ರಕ್ಷಿಸಲಾದ 13 ಮಂದಿಯನ್ನೂ ತೀವ್ರ ನಿಗಾ ಘಟಕದಲ್ಲಿಡಲಾಗಿದ್ದು, ಸಾಮಾನ್ಯ ಚಿಕಿತ್ಸೆ ನೀಡಲಾಗುತ್ತಿದೆ. ಮಕ್ಕಳಿಗೆ ಸೋಂಕು ತಗುಲಬಾರದು ಎಂಬ ಉದ್ದೇಶದಿಂದ ಪೋಷಕರ ಜತೆ ಮಕ್ಕಳ ಭೇಟಿಗೆ ಅವಕಾಶ ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.