ಚೀನಾ ಪಾರ್ಕಿಂಗ್​ ಲಾಟ್​ನಲ್ಲಿ ಬ್ಲಾಸ್ಟ್​ ಆಯ್ತು ₹80 ಲಕ್ಷದ ಟೆಸ್ಲಾ ಕಾರು..!

ಶಾಂಘೈ: ದುಬಾರಿ ಟೆಸ್ಲಾ ಕಾರ್​ವೊಂದು ಶಾಂಘೈನ ಪಾರ್ಕಿಂಗ್ ಲಾಟ್​​ನಲ್ಲಿ ಸ್ಫೋಟಗೊಂಡಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚೀನಾದ ಸೋಷಿಯಲ್ ಮೀಡಿಯಾ ಸೈಟ್​​ ವೀಬೋದಲ್ಲಿ ಈ ವಿಡಿಯೋ 2 ಕೊಟಿಗೂ ಅಧಿಕ ವ್ಯೂವ್ಸ್​ ಗಳಿಸಿದೆ. ವರದಿಗಳ ಪ್ರಕಾರ ಶಾಂಘೈನ ಕ್ಸೂಹಿ ಜಿಲ್ಲೆಯಲ್ಲಿರೋ ಟಾಯ್ಡಿ ಫ್ಲವರ್​ ಗಾರ್ಡನ್​​​​​​ ರೆಸಿಡೆಂಶಿಯಲ್ ಕಮ್ಯುನಿಟಿಯಲ್ಲಿ ಈ ಘಟನೆ ನಡೆದಿದೆ.

ಪಾರ್ಕಿಂಗ್​​ನಲ್ಲಿ ನಿಲ್ಲಿಸಲಾಗಿದ್ದ ಬಿಳಿ ಬಣ್ಣದ ಟೆಸ್ಲಾ ಮಾಡೆಲ್​ ಎಸ್​ ಕಾರ್​​​​ನಲ್ಲಿ ಮೊದಲು ಹೊಗೆ ಬರೋದನ್ನ ವಿಡಿಯೋದಲ್ಲಿ ಕಾಣಬಹುದು. ನಂತರ ನೋಡನೋಡ್ತಿದ್ದಂತೆ ಕಾರ್​ ದಟ್ಟ ಬೆಂಕಿಯೊಂದಿಗೆ ಬ್ಲಾಸ್ಟ್​​ ಆಗುತ್ತೆ. ಘಟನಾ ಸ್ಥಳಕ್ಕೆ 15 ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಅರ್ಧ ಗಂಟೆಯ ಕಾರ್ಯಾಚರಣೆ ಬಳಿಕ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದ್ದಾರೆ. ಈ ಕಾರಿನ ಬೆಲೆ ಅಂದಾಜು ₹80 ಲಕ್ಷ. ಘಟನೆಯಿಂದ ಕಾರು ಸಂಪೂರ್ಣವಾಗಿ ಸುಟ್ಟುಹೋಗಿದೆ. ಅಲ್ಲದೆ ಇದರ ಪಕ್ಕದಲ್ಲೇ ಇದ್ದ ಆಡಿ ಹಾಗೂ ಮತ್ತೊಂದು ಕಾರ್​​​ಗೂ ಹಾನಿಯಾಗಿದೆ. ಇನ್ನು ಈ ಘಟನೆ ಸಂಬಂಧ ಸದ್ಯ ತನಿಖೆ ನಡೆಸುತ್ತಿರುವುದಾಗಿ ಟೆಸ್ಲಾ ಸಂಸ್ಥೆ ಹೇಳಿದೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv