ನಾವು ತಮಿಳು ಚಿತ್ರ ನೋಡ್ತೇವೆ, ಆದ್ರೆ ಅಲ್ಲಿ ಕನ್ನಡ ಸಿನಿಮಾ ನೋಡುವುದಿಲ್ಲ- ಟೆನ್ನಿಸ್ ಕೃಷ್ಣ

ಮಂಗಳೂರು: ಸೂಪರ್ ಸ್ಟಾರ್​ ರಜನಿಕಾಂತ್​​ ಕಾಲ ಚಿತ್ರಕ್ಕೆ ರಾಜ್ಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಖ್ಯಾತ ಹಾಸ್ಯ ನಟ ಟೆನ್ನಿಸ್ ಕೃಷ್ಣ, ಕನ್ನಡಿಗರು ಬೇರೆ ಬೇರೆ ಭಾಷೆ ಚಿತ್ರವನ್ನು ನೋಡುತ್ತೇವೆ. ಆದರೆ ತಮಿಳುನಾಡಿನಲ್ಲಿ ನಮ್ಮ ಚಿತ್ರಗಳನ್ನು ನೋಡುವುದಿಲ್ಲ ಅಂತ ಅಸಮಾಧಾನ ವ್ಯಕ್ತಪಡಿಸಿದರು.
ರಜನಿಕಾಂತ್​ ನಮ್ಮವರೆ, ನಾವು ಅವರ ವಿರೋಧಿಯಲ್ಲ. ಅವರು ಕನ್ನಡ ಚಿತ್ರರಂಗದಿಂದ ಬಂದವರು. ಆದರೆ, ಕನ್ನಡ ಚಿತ್ರಗಳನ್ನು ತಮಿಳುನಾಡಿನಲ್ಲಿ ಜನರು ನೋಡುವುದಿಲ್ಲ. ತಮಿಳುನಾಡಿನಲ್ಲಿ ಕನ್ನಡ ಚಿತ್ರಕ್ಕೆ ಪ್ರೋತ್ಸಾಹ ಇಲ್ಲ. ಅವರು ಕೂಡ ಕನ್ನಡ ಚಿತ್ರಗಳನ್ನು ನೋಡಬೇಕು ಎಂದು ಒತ್ತಾಯಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ:contact@firstnews.tv