ಬರೀ ಟೆನಿಸ್ ಅಲ್ಲ, ಮಾನವೀಯತೆಯಲ್ಲೂ ನಂಬರ್​ 1 ರಫೆಲ್ ನಡಾಲ್​​​..!​

ರಫೆಲ್​ ನಡಾಲ್​ ವಿಶ್ವದ ನಂಬರ್​ 1 ಟೆನ್ನಿಸ್​ ಆಟಗಾರ. ಕೇವಲ ಟೆನ್ನಿಸ್​ನಲ್ಲಿ ಮಾತ್ರವಲ್ಲ ಮಾನವೀಯತೆಯಲ್ಲೂ ನಂಬರ್​ ಒನ್​ ಅನ್ನೋದನ್ನ ಸಾಬೀತು ಪಡಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಸ್ಪೇನ್​ನಲ್ಲಿ ಸುರಿದ ಭೀಕರ ಮಳೆಗೆ ಜನ ಜೀವನ ತತ್ತರಿಸಿ ಹೋಗಿದೆ. ಭೀಕರ ಮಳೆಗೆ ಇಡೀ ಸ್ಪೇನ್ ತೊಯ್ದು ತೆಪ್ಪೆಯಾಗಿದೆ. ಇನ್ನು ರಫೆಲ್​ ನಡಾಲ್ ವಾಸವಿರುವ ಮೊಜೋರ್ಕಾ ಪ್ರದೇಶದಲ್ಲಂತೂ ಪ್ರವಾಹದ ಹಾವಳಿಯೂ ತೀವ್ರವಾಗಿದೆ. ಹಗಲೂ-ರಾತ್ರಿ ಸುರಿದ ಮಳೆಗೆ ಮೊಜೋರ್ಕಾದಲ್ಲಿ 10 ಕ್ಕೂ ಹೆಚ್ಚು ಪ್ರಾಣಹಾನಿಯಾಗಿದೆ. ಇಲ್ಲಿ ಹೊಟೆಲ್​ ನಡೆಸಿಕೊಂಡಿದ್ದ ಬ್ರಿಟೀಷ್ ದಂಪತಿ ಟ್ಯಾಕ್ಸಿ ಸಮೇತ ಕೊಚ್ಚಿಹೋಗಿದ್ದಾರೆ. ನೂರಾರು ಮನೆಗಳಿಗೆ ನೀರು ನುಗ್ಗಿ ಜನ ನಿರಾಶ್ರಿತರಾಗಿದ್ದಾರೆ.

ಸದ್ಯ ಹುಟ್ಟೂರು ಮೊಜಾರ್ಕೋದಲ್ಲೇ ಇರುವ ರಫೆಲ್​ ನಡಾಲ್ ಪ್ರವಾಹ ನಿರಾಶ್ರಿತರ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ. ಪ್ರವಾಹದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರನ್ನ ತನ್ನ ಸ್ಪೋರ್ಟ್ಸ್​​​​ ಸೆಂಟರ್​ಗೆ ಕರೆದೋಯ್ದು ಆಶ್ರಯ ನೀಡಿ, ಊಟ ವಸತಿ ವ್ಯವಸ್ಥೆ ಕಲ್ಪಿಸಿದ್ದಾರೆ. ಅಲ್ಲದೇ ಸಾಮಾನ್ಯರಲ್ಲಿ ಸಾಮಾನ್ಯರಂತೆ ಪ್ರವಾಹದಿಂದ ಹಾನಿಗೊಳಗಾದ ಜಾಗಗಳಿಗೆ ತೆರಳಿ ನೀರು, ಮಣ್ಣು ತೆರವುಗಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಹಾಗೂ ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಸ್ಯಾಡ್​ ಡೇ ಇನ್​ ಮೊಜಾರ್ಕೋ ಅಂತಾ ಬರೆದುಕೊಂಡಿದ್ದಾರೆ. ಅದೇನೆ ಇರ್ಲಿ ತಾನೊಬ್ಬ ವಿಶ್ವದ ನಂಬರ್​ ಒನ್​ ಟೆನ್ನಿಸ್​ ಆಟಗಾರ ಅನ್ನೋದನ್ನು ಮರೆ ಇಂತಹ ಸಮಾಜಮುಖಿ ಕಾರ್ಯಕ್ಕೆ ಮುಂದಾಗಿರೋದು ಇತರರಿಗೆ ಮಾದರಿಯಾಗಲಿ ಅನ್ನೋದೇ ನಮ್ಮ ಆಶಯ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv ​ ​​