ತಾತ್ಕಾಲಿಕ ಶಿಕ್ಷಕರನ್ನು ಮರು ನೇಮಕ ಮಾಡುವಂತೆ ಆಗ್ರಹ..!

ಬಳ್ಳಾರಿ: ಕಳೆದ ಶೈಕ್ಷಣಿಕ ವರ್ಷದಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕವಾಗಿದ್ದ ತಾತ್ಕಾಲಿಕ ಶಾಲಾ ಶಿಕ್ಷಕರನ್ನು ಸೇವೆಯಿಂದ ಕೈ ಬಿಡಲಾಗಿದೆ. ಇವರನ್ನೇ ನಂಬಿಕೊಂಡಿದ್ದ ಕುಟುಂಬಗಳು ಈಗ ಅತಂತ್ರ ಸ್ಥಿತಿಗೆ ಬಂದಿವೆ. ಶಿಕ್ಷಕರನ್ನು ಒಂದು ವರ್ಷದ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿತ್ತು ಎನ್ನಲಾಗಿದ್ದು, ಅವರಿಗೆ ಮಾಹಿತಿ ನೀಡಿಯೇ ಕೆಲಸದಿಂದ ಕೈ ಬಿಡಲಾಗಿದೆ ಎನ್ನಲಾಗಿದೆ. ಆದರೂ, ಮಾನವೀಯತೆಯ ಆಧಾರದ ಮೇಲಾದ್ರೂ ಎಲ್ಲ ತಾತ್ಕಾಲಿಕ ಶಿಕ್ಷಕರನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಮರುನೇಮಕ ಮಾಡಬೇಕೆಂದು ಆಗ್ರಹಿಸಿ ಕೆಲಸ ಕಳೆದುಕೊಂಡ ಶಿಕ್ಷಕರು ಬಳ್ಳಾರಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಕಂಡು ಬಂದಾಗ ನಮ್ಮನ್ನು ಸರ್ಕಾರವೇ ನೇಮಕಾತಿ ಮಾಡಿಕೊಂಡಿದೆ. ಈಗ ಏಕಾಏಕಿ ಕೆಲಸದಿಂದ ತೆಗೆದು ಹಾಕಿದೆ. ಒಂದೇ ವರ್ಷ ಸೇವೆ ಮಾಡಿದ ನಾವು ಭವಿಷ್ಯದ ಬಗ್ಗೆ ವಿಚಲಿತರಾಗಿದ್ದೇವೆ. ಸರ್ಕಾರದ ಈ ಕ್ರಮದಿಂದ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಕುಗ್ಗುತ್ತದೆ. ಹೀಗಾಗಿ ತಾತ್ಕಾಲಿಕ ನೇಮಕಾತಿ ರದ್ದುಗೊಳಿಸಿ ಖಾಯಂ ಶಿಕ್ಷಕರ ನೇಮಕಾತಿ ಮಾಡಬೇಕೆಂದು ಕೆಲಸ ಕಳೆದುಕೊಂಡ ಶಿಕ್ಷಕರು ಸರ್ಕಾರಕ್ಕೆ ಅವಲತ್ತುಕೊಂಡಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv