30 ಅಡಿ ಫ್ಲೈ ಓವರ್‌ನಿಂದ ಕೆಳಗೆ ಬಿದ್ದ ಟೆಂಪೋ

ಬೆಂಗಳೂರು ಗ್ರಾಮಾಂತರ : ಚಾಲಕನ ನಿಯಂತ್ರಣ ತಪ್ಪಿ ಟೊಮ್ಯಾಟೋ ತುಂಬಿದ್ದ ಟೆಂಪೋವೊಂದು 30 ಅಡಿ ಎತ್ತರದ ಫ್ಲೈ ಓವರ್‌ನಿಂದ ಕೆಳಗೆ ಬಿದ್ದಿದೆ. ಟೆಂಪೋದಲ್ಲಿದ್ದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ನೆಲಮಂಗಲ ತಾಲೂಕಿನ ಅರಿಶಿನಕುಂಟೆ ಬಳಿಯ ಬೆಂಗಳೂರು-ತುಮಕೂರು ರಾಷ್ಷ್ರೀಯ ಹೆದ್ದಾರಿ 4 ರಲ್ಲಿ ಘಟನೆ ನಡೆದಿದ್ದು ಟೆಂಪೋದಲ್ಲಿ ತುಂಬಿದ್ದ ಟೊಮ್ಯಾಟೋ ರಸ್ತೆ ಪಾಲಾಗಿವೆ. ಚಿಕ್ಕಬೆಳವಂಗಲದಿಂದ ಯಶವಂತಪುರ ಮಾರುಕಟ್ಟೆಗೆ ರೈತರು ಟೊಮ್ಯಾಟೋ ಸಾಗಿಸುವ ವೇಳೆ ಈ ಅವಘಡ ನಡೆದಿದೆ. ಟೆಂಪೋ ಸಂಪೂರ್ಣ ನುಜ್ಜು-ಗುಜ್ಜಾಗಿದ್ದು ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪರಿಣಾಮ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *