ಮಳೆಯ ಲಾಭ ಪಡೆದು ದೇವಸ್ಥಾನ ದೋಚಿದ ಖದೀಮರು

ಉಡುಪಿ: ಜಿಲ್ಲೆಯ ಕಾಪುವಿನ ಎಲ್ಲೂರುವೀರಾಂಜನೇಯ ಸನ್ನಿಧಿಗೆ ಕಳ್ಳರು ನುಗ್ಗಿ ಕಳ್ಳರು ಲಕ್ಷಾಂತರ ಮೌಲ್ಯದ ಚಿನ್ನ ಬೆಳ್ಳಿ ಪರಿಕರಗಳನ್ನು ಕದ್ದು ಪರಾರಿಯಾಗಿದ್ದಾರೆ.
ರಾತ್ರಿ ಸುರಿದ ಭಾರೀ ಮಳೆಯ ಲಾಭ ಪಡೆದ ಕಳ್ಳರು ದೇವರ ಗುಡಿಯ ಬಾಗಿಲ ಬೀಗ ಮುರಿದು ಆಂಜನೇಯ ವಿಗ್ರಹಕ್ಕೆ ಹೊದಿಸಲಾದ ಬೆಳ್ಳಿಯ ಕವಚ, ಪ್ರಭಾವಳಿ ಹಾಗು ಚಿನ್ನದ ಸರ, ಬೆಳ್ಳಿ ದೀಪಗಳನ್ನು ದೋಚಿದ್ದಾರೆ. ಬೆಳಿಗ್ಗೆ ವಿರಾಂಜನೇಯ ದೇವಸ್ಥಾನದ ಅರ್ಚಕ ಸತ್ಯನಾರಾಯಣ ಆಚಾರ್ಯರವರು ಪೂಜೆಗಾಗಿ ಸನ್ನಿಧಿಗೆ ತೆರಳಿದಾಗ ಕಳ್ಳತನ ನಡೆದಿರುವ ವಿಚಾರ ಬೆಳಕಿಗೆ ಬಂದಿದೆ.

ಈ ದೇವಸ್ಥಾನ ಎಲ್ಲೂರು ಶ್ರೀ ವಿಶ್ವನಾಥ ಕ್ಷೇತ್ರ ಆಡಳಿತಕ್ಕೆ ಒಳಪಟ್ಟಿದ್ದುದೆ. ಸ್ಥಳಕ್ಕೆ ಕಾಪು ವೃತ್ತ ನಿರೀಕ್ಷಕ ಹಾಲಮೂರ್ತಿರಾವ್ , ಪಡುಬಿದ್ರಿ ಪೊಲೀಸರು ,ಉಡುಪಿ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ:cantact@firstnews.tv