ಸಿಎಂ, ಡಿಸಿಎಂ ಪತ್ನಿಯರಿಂದ ಮುಂದುವರಿದ ಟೆಂಪಲ್ ರನ್

ಹುಬ್ಬಳ್ಳಿ: ಸಿಎಂ ಕುಮಾರಸ್ವಾಮಿ ಅವರ ಪತ್ನಿ ಹಾಗೂ ಡಿಸಿಎಂ ಡಾ ಪರಮೇಶ್ವರ್​​ ಅವರ ಪತ್ನಿಯಿಂದ ಟೆಂಪಲ್​ ರನ್​ ಮುಂದುವರಿದಿದ್ದು, ಅತ್ತ ಅನಿತಾ ಕುಮಾರಸ್ವಾಮಿ ಶೃಂಗೇರಿಗೆ ಭೇಟಿ ನೀಡಿದ ಬೆನ್ನಲ್ಲೇ, ಡಿಸಿಎಂ ಪತ್ನಿ ಸಿದ್ದಾರೂಡ ಮಠಕ್ಕೆ ಭೇಟಿ ನೀಡಿದ್ದಾರೆ.
ನಗರದ ಸಿದ್ದಾರೂಡ ಮಠಕ್ಕೆ ಇಂದು ಡಿಸಿಎಂ ಪತ್ನಿ ಕನ್ನಿಕಾ ಪರಮೇಶ್ವರ ಭೇಟಿ ನೀಡಿದರು. ಈ ವೇಳೆ ಸಿದ್ದಾರೂಡರಿಗೆ ವಿಶೇಷ ಪೂಜೆ ಸಲ್ಲಿಸಿ, 10 ನಿಮಿಷಗಳ ಕಾಲ ಧ್ಯಾನ ಮಾಡಿದರು. ಸಿದ್ದಾರೂಡರ ದರ್ಶನದ ಬಳಿಕ ಇಲ್ಲಿನ ಪತೇಶಲಿ ದರ್ಗಾಕ್ಕೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv